ಪೇಜಾವರ ಸ್ವಾಮಿಗಳು ಬಿಜೆಪಿ ವಕ್ತಾರರಂತೆ ವರ್ತಿಸುವುದು ಸರಿಯಲ್ಲ: ಕಾಂಗ್ರೆಸ್

ಉಡುಪಿ: ಪೇಜಾವರ ಸ್ವಾಮಿಗಳು ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಮಾತನ್ನು ಸಂಪೂರ್ಣ ಕೇಳಿ ಮತ್ತೆ ಟೀಕೆ ಮಾಡುವುದು ಉತ್ತಮ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.
ಬಿಜೆಪಿಯವರು ರಾಜಕೀಯ ಉದ್ದೇಶಕ್ಕೆ ರಾಹುಲ್ ಗಾಂಧಿಯವರ ಮಾತನ್ನು ತಿರುಚಿ ಹೇಳುತ್ತಿದ್ದಾರೆ. ಆದರೆ ಪೇಜಾವರ ಸ್ವಾಮಿಗಳು ಸಂಪೂರ್ಣ ಸಮಾಜಕ್ಕೆ ಬುದ್ಧಿ ಹೇಳುವವರು ಒಂದು ಪಕ್ಷದ ಪರವಹಿಸಿ ಮಾತನಾಡುವುದು ಅವರಿಗೆ ಶೋಭೆ ತರುವಂತಹುದಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ಬಿಜೆಪಿಯ ನಕಲಿ ಹಿಂದುತ್ವವನ್ನು ಟೀಕಿಸಿದ್ದು ಬಿಟ್ಟರೆ ಎಲ್ಲೂ ಸಮಸ್ತ ಹಿಂದೂಗಳ ಭಾವನೆಗೆ ನೋವಾಗುವ ಮಾತನ್ನು ಆಡಲಿಲ್ಲ. ಸಮಾಜದಲ್ಲಿ ಗೌರವಿಸಲ್ಪಡುವ ಪೇಜಾವರ ಸ್ವಾಮಿಗಳು ಬಿಜೆಪಿ ವಕ್ತಾರರಂತೆ ವರ್ತಿಸುವುದು ಸರಿಯಲ್ಲ ಎಂದು ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
Next Story





