ಜಮೀಯತುಲ್ ಫಲಾಹ್ ಕಾಪು ತಾಲೂಕು ಪದಾಧಿಕಾರಿಗಳ ಆಯ್ಕೆ

ಕಾಪು: ಜಮೀಯತುಲ್ ಫಲಾಹ್ ಕಾಪು ಘಟಕದ ಮಹಾ ಸಭೆಯು ಮುಹಮ್ಮದ್ ಆಸಿಫ್ ಬೈಕಾಡಿಯವರ ಅಧ್ಯಕ್ಷತೆಯಲ್ಲಿ ಕಾಪು ಸಿಟಿ ಸೆಂಟರ್ ನಲ್ಲಿರುವ ಜಮೀಯತುಲ್ ಫಲಾಹ್ ಕಚೇರಿಯಲ್ಲಿ ನಡೆಯಿತು.
ಶಬೀಹ್ ಅಹ್ಮದ್ ಕಾಝಿ ಸ್ವಾಗತಿಸಿದರು. ಮುಂದಿನ ಎರಡು ವರ್ಷಗಳ ಅವಧಿಗೆ 21 ಮಂದಿಯನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಯಿತು.
ನಂತರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರು, ಉಪಾಧ್ಯಕ್ಷರಾಗಿ ಅನ್ವರ್ ಅಲಿ ಕಾಪು, ಬುಡನ್ ಸಾಹೇಬ್ ಪಡುಬಿದ್ರೆ, ಪ್ರಧಾನ ಕಾರ್ಯದರ್ಶಿಯಾಗಿ ಶಬೀಹ್ ಅಹ್ಮದ್ ಕಾಝಿ, ಕಾರ್ಯದರ್ಶಿಯಾಗಿ ಮುಹಮ್ಮದ್ ಸಲೀಮ್ ಕಲ್ಪಂಡೆ, ಕೋಶಾಧಿಕಾರಿಯಾಗಿ ನಸೀರ್ ಅಹ್ಮದ್ ಶರ್ಫುದ್ದೀನ್ , ಸಂಘಟನಾ ಕಾರ್ಯದರ್ಶಿಯಾಗಿ ಮುಹಮ್ಮದ್ ಸುಲೈಮಾನ್, ಪತ್ರಿಕಾ ಕಾರ್ಯದರ್ಶಿಯಾಗಿ ಶೇಕ್ ಸನವರ್ ಅವರು ಅವಿರೋಧವಾಗಿ ಆಯ್ಕೆಯಾದರು.
ವೀಕ್ಷಕರಾಗಿ ಮುಹಮ್ಮದ್ ಅಸ್ಲಮ್ ಹೈಕಾಡಿ ಉಪಸ್ಥಿತರಿದ್ದರು. ಅನ್ವರ್ ಅಲಿ ಅವರ ಕುರ್ ಆನ್ ಪಠಣದೊಂದಿಗೆ ಸಭೆಯು ಪ್ರಾರಂಭವಾಯಿತು.
ನಿರ್ಗಮನ ಅಧ್ಯಕ್ಷರಾದ ಶಬೀಹ್ ಅಹ್ಮದ್ ಕಾಝಿ ಅವರು ತಮ್ಮ ಅವಧಿಯಲ್ಲಿ ಸಹಕಾರ ನೀಡಿದ ಜಮೀಯತುಲ್ ಫಲಾಹ್ ಬಳಗಕ್ಕೆ ಕೃತಜ್ಞತೆ ಸಲ್ಲಿಸಿದರು.
ಹಾಲಿ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ಸಾಹೇಬ್ ಅವರು ನಮ್ಮ ಮುಂದೆ ಸಮುದಾಯಕ್ಕೆ ಹಲವಾರು ಯೋಜನೆಗಳನ್ನು ಹಾಕಿಕೊಂಡಿದ್ದು, ಅವುಗಳನ್ನು ಅನುಷ್ಠಾನಿಸಲು ನಾವೆಲ್ಲಾ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸುವ ಎಂದು ವಿನಂತಿಸಿಕೊಂಡರು. ನಸೀರ್ ಅಹ್ಮದ್ ಶರ್ಫುದ್ದೀನ್ ವಂದಿಸಿದರು.







