Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್...

ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧ್ಯ: ಕುಮಾರಸ್ವಾಮಿ

ನಝೀರ್ ಪೊಲ್ಯ/ವಾರ್ತಾಭಾರತಿನಝೀರ್ ಪೊಲ್ಯ/ವಾರ್ತಾಭಾರತಿ16 Nov 2026 6:55 PM IST
share
ಹಿರಿಯೂರು ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧ್ಯ: ಕುಮಾರಸ್ವಾಮಿ

ಕೊಲ್ಲೂರು, ನ.16: ಹಿರಿಯೂರು ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಸ್ಪರ್ಧಿಸಬೇಕು ಎಂಬುದು ಬಿಜೆಪಿ ಆಸೆ. ಹಿಂದಿನಿಂದಲೂ ಹಿರಿಯೂರು ವಿಧಾನಸಭಾ ಕ್ಷೇತ್ರ ಅಂದರೆ ಅದು ಕಾಂಗ್ರೆಸ್ ಜೆಡಿಎಸ್ ನಡುವಿನ ಹೋರಾಟದ ಕ್ಷೇತ್ರ. ಜೆಡಿಎಸ್‌ನ 40 ಸಾವಿರ ಮತಗಳು ಹಿರಿಯೂರಿನಲ್ಲಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಗೆಲುವು ಸಾಧ್ಯವಿದೆ. ಈ ಕುರಿತು ಬಿಜೆಪಿಯವರಲ್ಲಿ ಮನವಿ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ಕೊಲ್ಲೂರು ದೇವಳದಲ್ಲಿ ಸೋಮವಾರ ಪೂಜೆ ಸಲ್ಲಿಸಿದ ಬಳಿಕ ಸುದ್ಧಿಗೋಷ್ಟಿಯಲ್ಲಿ ಅವರು ಮಾತನಾಡುತಿದ್ದರು. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ನನಗೆ ವೈಯಕ್ತಿಕವಾಗಿ ಯಾವುದೇ ಪ್ರತಿಷ್ಠೆ ಇಲ್ಲ, ಯಾವುದೇ ಗೊಂದಲವಿಲ್ಲ. ಈ ವಿಚಾರದಲ್ಲಿ ನಾವು ತಾಳ್ಮೆಯಿಂದ ಇದ್ದೇವೆ ತಾಳ್ಮೆಯಿಂದ ಇರುತ್ತೇವೆ ಎಂದು ಸ್ಪಷ್ಟಪಡಿಸಿದ ಅವರು, ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿರುವುದರಿಂದ ಮುಂದೆಯೂ ಸ್ಥಳೀಯಾಡಳಿತ ಚುನಾವಣೆಯನ್ನು ಮೈತ್ರಿಯಾಗಿ ಎದುರಿಸ ಬೇಕು. ಮೈತ್ರಿಯಲ್ಲಿ ಅಪಸ್ವರ ಬರಬಾರದು ಎಂಬುದು ನಮ್ಮ ಆಶಯ ಎಂದರು.

ರಾಜ್ಯ ಕಾಂಗ್ರೆಸ್ ಸರಕಾರ ಮೂರೂವರೆ ವರ್ಷ ಪೂರ್ಣಗೊಳಿಸಿದೆ. ಆದರೆ ಅಭಿವೃದ್ದಿಗೆ ಪೂರಕವಾದ ಸಾಧನೆ ಗಳನ್ನು ಚರ್ಚೆ ಮಾಡಲು ಯಾವುದೇ ವಿಚಾರಗಳಿಲ್ಲ. ನುಡಿದಂತೆ ನಡೆದಿದ್ದೇವೆ ಎಂದು ಪಂಚ ಗ್ಯಾರಂಟಿ ತಂದು ರಾಜ್ಯಕ್ಕೆ ನೀಡಿದ್ದಾರೆ. ಈ ಗ್ಯಾರಂಟಿ ನೀಡಲು ರಾಜ್ಯ ಸರಕಾರದ ಕೊಡುಗೆ ಏನು? ಈ ಹೊರೆ ಯಾರ ಮೇಲೆ ಹಾಕುತ್ತಿದ್ದಾರೆ. ರಾಜ್ಯದ ಜನರ ಹಣ ದುರ್ಬಳಕೆಯಾಗುತ್ತಿದೆ. ಆಡಳಿತವನ್ನು ಪರಿಣಾಮಕಾರಿಯಾಗಿ ಮಾಡಿಲ್ಲ ಎಂದವರು ಆರೋಪಿಸಿದರು.

ರಾಜ್ಯ ಸರಕಾರ ಜನತೆಗೆ ಸುಳ್ಳು ಹೇಳಿ ಮೋಸ ಮಾಡುತ್ತಿದೆ. ಬರಗಾಲ ದಿಂದ ರಾಜ್ಯದ ರೈತರಿಗೆ ಬಿತ್ತನೆ ಬೀಜ ಸಮಸ್ಯೆಯಿದೆ. ಬಿತ್ತನೆಯ ನಷ್ಟ ರಾಜ್ಯಕ್ಕೆ 62ಸಾವಿರ ಕೋಟಿ ನಷ್ಟ ಎಂದು ಅಂದಾಜಿಸಲಾಗಿದೆ. 22 ಸಾವಿರ ಕೋಟಿ ಎನ್.ಡಿ.ಆರ್‌ಎಫ್. ಹಣ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಪ್ರಾರಂಭವಾದಾಗಲೇ ಬರ ತಾಲೂಕು ಘೋಷಣೆ ಮಾಡಲು ಸರಕಾರ ವಿಫಲವಾದ್ದರಿಂದ ಅವರದ್ದೆ ಪಕ್ಷದ ಶಾಸಕರು ರಾಜಿನಾಮೆ ನೀಡಲು ಮುಂದಾಗಿರುವುದು ದುರಂತ ಎಂದು ಅವರು ಟೀಕಿಸಿದರು.

ಕುಮಾರಕೃಪಾಕ್ಕೆ ಹೆಸರು ಬದಲಾವಣೆ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು ಗಂಗಾ, ಕಾವೇರಿ ಹೆಸರಿಟ್ಟರೇನು? ಕೋತ್ವಾಲ್ ಹೆಸರಿಟ್ಟೇನು?. ಕೆಂಗಲ್ ಹನುಮಂತಯ್ಯ ಕಟ್ಟಿಸಿದ ಆ ಕಟ್ಟಡವನ್ನು ಇದೀಗ ಏಳು ಸುತ್ತಿನ ಕೋಟೆ ಮಾಡಿದ್ದಾರೆ ಎಂದು ಟೀಕಿಸಿದರು. ಸ್ಟಿಂಗ್ ವಿಚಾರ ತನಿಖೆಯಾಗುತ್ತಿದ್ದು ಸತ್ಯ ಹೊರಬೀಳಲಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಮುಖಂಡರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಸಂದೇಶ್ ಭಟ್, ಹುಸೇನ್ ಹೈಕಾಡಿ, ಮರ್ನ್ಸೂ ಇಬ್ರಾಹಿಂ, ಅಕ್ಷಿತ್ ಸುವರ್ಣ, ಕುಮಟದ ಸೂರಜ್ ನಾಯ್ಕ್ ಸೋನಿ, ಶಾಲಿನಿ ಶೆಟ್ಟಿ, ಶ್ರೀಕಾಂತ ಅಡಿಗ ಉಪಸ್ಥಿತರಿದ್ದರು.

‘ಭೂವ್ಯವಹಾರ ವೃದ್ಧಿಗಾಗಿ ಕರಾವಳಿಯಲ್ಲಿ ಕ್ಯಾಬಿನೆಟ್’

ಕರಾವಳಿಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಕರಾವಳಿ ಅಭಿವೃದ್ಧಿಗೆ 32 ಸಾವಿರ ಕೋಟಿ ಅನುದಾನ ನೀಡುವ ಘೋಷಣೆ ಮಾಡಿ 2-3 ತಿಂಗಳು ಕಳೆದಿದೆ. ಆದರೆ ಇನ್ನೂ ಹಣ ಬಿಡುಗಡೆಯಾಗಿಲ್ಲ. 32 ಸಾವಿರ ಕೋಟಿ ಕೊಡದಿದ್ದರೂ ಕನಿಷ್ಟ 2-3 ಸಾವಿರ ಕೋಟಿ ನೀಡಿ ಅಭಿವೃದ್ಧಿ ಮಾಡಬೇಕು. ಕರಾವಳಿಯ ಜನತೆಗೆ ಘೋಷಣೆಯ ಮೂಲಕ ತೃಪ್ತಿ ಪಡಿಸಲು ಯೋಚಿಸಿದಲ್ಲಿ ಪ್ರಾಯಶ್ಚಿತ್ತಕ್ಕೆ ಕಾಂಗ್ರೆಸ್ ಸಿದ್ಧವಾಗಿರಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ವಿಶೇಷ ಕ್ಯಾಬಿನೆಟ್ ಕರಾವಳಿಯ ಮಂಗಳೂರು, ಉಡುಪಿಯ ಅಭಿವೃದ್ದಿಗಲ್ಲ. ಬೆಂಗಳೂರಿನಲ್ಲಿರುವ ಭೂ ವ್ಯವಹಾರ ವನ್ನು ಮಂಗಳೂರಿನಲ್ಲಿ ವೃದ್ಧಿಗೊಳಿಸಲು ಕರಾವಳಿ ಬಗ್ಗೆ ಅಕ್ಕರೆ ಬಂದಿದೆ. ಇದನ್ನು ಮೀನುಗಾರರು, ಬೇರೆ ಬೇರೆ ಉದ್ಯಮಿಗಳು ಅರಿಯಬೇಕು. ಈ ಸರಕಾರ ಒಳ್ಳೆ ಕೆಲಸ ಮಾಡಿದರೆ ಬೆಂಬಲ ನೀಡಬಹುದಾಗಿತ್ತು. ಆದರೆ ಇದು ಲೂಟಿ ಸರಕಾರ. ಕಾರ್ಮಿಕ ಇಲಾಖೆ ಹಣ, ದಲಿತರ ಗಂಗಕಲ್ಯಾಣ ಯೋಜನೆಯಲ್ಲೂ ಗೋಲ್‌ಮಾಲ್ ಆಗುತ್ತಿದೆ ಎಂದು ಅವರು ಆರೋಪಿಸಿದರು.

ಕರಾವಳಿಯಲ್ಲಿ ಪಕ್ಷ ಸಂಘಟನೆ ಹೆಚ್ಚು ಆಗಬೇಕು. ಇಲ್ಲಿ ಎರಡು ಪ್ರಮುಖ ಪಕ್ಷಗಳು ಸಹಿತ ಕೆಲ ಸಣ್ಣಪುಟ್ಟ ಪಕ್ಷಗಳು ಸೆಕ್ಯೂಲರಿಸಂ ಹಾಗೂ ಕಮ್ಯೂನಲಿಸಂ ಮುಂದಿಟ್ಟುಕೊಂಡು ರಾಜಕೀಯವಾಗಿ ಪ್ರಾಮುಖ್ಯತೆ ನೀಡಿ ಅವರ ಪಕ್ಷ ಬೆಳೆಸಿಕೊಂಡಿದ್ದಾರೆ. ವಿವಿಧ ವಿಚಾರದಲ್ಲಿ ಅಭಿವೃದ್ಧಿ ಕಾಣುತ್ತಿರುವ ಕರಾವಳಿಯಲ್ಲಿ ಹೊಸ ವಾತಾವರಣ ಸೃಷ್ಟಿಸಲು ಯುವಕರು ಮುಂದಾಗಬೇಕು ಎಂದರು.

‘ರೈತರ ಬದುಕಿನ ಜೊತೆ ಸರಕಾರ ಚೆಲ್ಲಾಟವಾಡುತ್ತಿದೆ. ನಾನು ಎರಡು ಬಾರಿ ಸಿಎಂ ಆಗಿದ್ದಾಗ ರೈತರು ಬೀದಿಗಿಳಿಯುವಂತೆ ಮಾಡಿಲ್ಲ. ಇನ್ನು ಕಬ್ಬು ಬೆಳೆಗಾರರಿಗೆ ಹೋರಾಟದ ಬಳಿಕವೂ ಯಾವುದೇ ಪ್ರಯೋಜನೆ ವಾಗಿಲ್ಲ. ಇದುವರೆಗೂ ಕಬ್ಬು ಬೆಳೆಗಾರರ ನೆರವಿಗೆ ಈ ಸರಕಾರ ಬಂದಿಲ್ಲ. ಸರಿಯಾದ ನೀರು ಹಂಚಿಕೆಯಾಗದೆ ಕಬ್ಬು ಬೆಳೆ ಸಂಪೂರ್ಣ ನಾಶವಾಗಿದೆ ಎಂದು ಅವರು ದೂರಿದರು’

-ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವರು

Tags

JD(S)victorypossibleHiriyur constituencyKumaraswamy
share
ನಝೀರ್ ಪೊಲ್ಯ/ವಾರ್ತಾಭಾರತಿ
ನಝೀರ್ ಪೊಲ್ಯ/ವಾರ್ತಾಭಾರತಿ
Next Story
X