ಜೋಗಿ ಸಮಾಜ ಸೇವಾ ಸಮಿತಿ ವಾರ್ಷಿಕೋತ್ಸವ : ಸಾಧಕರಿಗೆ ಸನ್ಮಾನ

ಉಡುಪಿ, ನ.12: ಜೋಗಿ ಸಮಾಜ ಸೇವಾ ಸಮಿತಿ ಉಡುಪಿ -ಕಾರ್ಕಳ ಘಟಕದ 16ನೇ ವಾಷಿಕೋತ್ಸವವು ಅಧ್ಯಕ್ಷ ಗೋವಿಂದ ಜೋಗಿ ಪಳ್ಳಿ ನೇತೃತ್ವದಲ್ಲಿ ನ.9ರಂದು ಉಡುಪಿ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಜರಗಿತು.
ಸಮಾಜದ ಹಿರಿಯರು ಮತ್ತು ಸಮಾಜದ ಏಳಿಗೆಗೆ ಶ್ರಮಿಸಿರುವ ಕೆ.ಎನ್.ಶ್ರೀನಿವಾಸ ಜೋಗಿ ಬೆಂಗಳೂರು ಅವರಿಗೆ ಜೋಗಿ ರತ್ನ, ದೇವರಾಜ ಬಳೆಗಾರ್ ಬೈಂದೂರು ಅವರಿಗೆ ಜೋಗಿ ಭಾರ್ಗವ ಹಾಗೂ ಪುರುಷೋತ್ತಮ ಎಚ್.ಕೆ. ಮಂಗಳೂರು ಅವರಿಗೆ ಜೋಗಿ ಸಾಮ್ರಾಟ್ ಬಿರುದು ಸಹಿತ ಸನ್ಮಾನ ಮಾಡಲಾಯಿತು.
ಸಮಾಜದಲ್ಲಿ ವಿವಿಧ ಕ್ಷೆತ್ರದಲ್ಲಿ ಸೇವೆ ಸಲ್ಲಿಸಿರುವ ಹಾಗೂ ಸಮಾಜದ ಹಿರಿಯ ವ್ಯಕ್ತಿಗಳಿಗೆ ಮತ್ತು ಅತೀ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಗೌರವ ಸಲ್ಲಿಸಲಾಯಿತು. ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ವಿಶು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಮಾಜದ ಮುಖಂಡರಾದ ನವೀನಚಂದ್ರ ಜೋಗಿ ಮತ್ತು ಕೆ.ಎನ್. ಮುರಲೀಧರ ಜೋಗಿ ಕಮ್ಮರಡಿ ಇವರಿಂದ ಸನ್ಮಾನ ಕಾರ್ಯಕ್ರಮವು ನಡೆಯಿತು.
ಉದ್ಯಮಿ ಕೆ.ಎನ್.ಚಂದ್ರಶೇಖರ ಜೋಗಿ ಬೆಂಗಳೂರು, ಸ್ಥಾಪಕಾಧ್ಯಕ್ಷ ನವೀನಚಂದ್ರ ಜೋಗಿ, ಮಾಜಿ ಅಧ್ಯಕ್ಷ ಪಿ.ಸುರೇಶ್ ಕುಮಾರ್ ಹೆಬ್ರಿ, ಗೌರವಾಧ್ಯಕ್ಷ ಹರೀಶ್ಚಂದ್ರ ಜೋಗಿ ಕಟಪಾಡಿ, ಕರ್ನಾಟಕ ಜೋಗಿ ಸುಧಾರಕ ಸಂಘದ ಅಧ್ಯಕ್ಷರ ಕಿರಣ್ ಕುಮಾರ್ ಜೋಗಿ ಮಂಗಳೂರು, ಉಡುಪಿ ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ಶ್ರೀಕಾಂತ್, ಕುಂದಾಪುರ ಸಂಘದ ಅಧ್ಯಕ್ಷ ರಮೇಶ್ ಜೋಗಿ ಹೆಮ್ಮಾಡಿ, ಮಹಿಳಾ ಸಂಘದ ಅಧ್ಯಕ್ಷೆ ರಜನಿ ಜೋಗಿ ಸೂಡಾ, ಉದ್ಯಮಿ ಉದಯ ಕುಮಾರ್ ಜೋಗಿ ಬೆಂಗಳೂರು, ಮಾಜಿ ಅಧ್ಯಕ್ಷ ರವೀಂದ್ರ ಜೋಗಿ ಉಡುಪಿ, ಉದ್ಯಮಿ ಉದಯ ಜೋಗಿ ಗೋಳಿಯಂಗಡಿ, ಉ.ಕ. ಅಧ್ಯಕ್ಷ ಶಿವರಾಮ ಜೋಗಿ, ದಿಲೀಪ್ ಜೋಗಿ, ಉಡುಪಿ ಜೋಗಿ ವಿವಿದೋದ್ದೇಶ ಸಂಘದ ಅಧ್ಯಕ್ಷ ವಸಂತ ಜೋಗಿ ಎರ್ಮಾಳು, ಕುಂದಾಪುರ ಜೋಗಿ ವಿವಿದೋದ್ದೇಶ ಸಂಘ ಅಧ್ಯಕ್ಷ ಶೇಖರ ಜೊಗಿ ಪ್ರಧಾನ ಕಾರ್ಯದರ್ಶಿ ಅಶೋಕ ಜೋಗಿ ಕಾರ್ಕಳ ಉಪಸ್ಥಿತರಿದ್ದರು.
ಕೋಶಾಧಿಕಾರಿ ರಾಕೇಶ್ ಜೋಗಿ ನಿಟ್ಟೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಭಾಕರ ಜೋಗಿ ಬಂಟಕಲ್ಲು ಕಾರ್ಯಕ್ರಮ ನಿರೂಪಿಸಿದರು.







