ಜೂ. 28 , 29 : ಕಾರ್ಕಳ ಕಾಂಗ್ರೆಸ್ ವತಿಯಿಂದ ಎಸ್.ಐ.ಆರ್. ಬಗ್ಗೆ ಮಾಹಿತಿ ಕಾರ್ಯಕ್ರಮ

ಸಾಂದರ್ಭಿಕ ಚಿತ್ರ | PC : PTI
ಕಾರ್ಕಳ : ಸಾರ್ವಜನಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಹಾಯ ಮಾಡುವ ಉದ್ದೇಶದಿಂದ ಎಸ್.ಐ.ಆರ್. ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಾರ್ವಜನಿಕರಿಗೆ, ಕಾರ್ಯಕರ್ತರಿಗೆ ಮತ್ತು ಬಿಎಲ್ಎ-2ಗಳಿಗೆ ನೀಡುವ ನಿಟ್ಟಿನಲ್ಲಿ ಕಾರ್ಕಳ ಕಾಂಗ್ರೆಸ್ ಪಕ್ಷದ ವತಿಯಿಂದ ಕಾಂಗ್ರೆಸ್ ಮುಖಂಡ ಉದಯ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಆರು ವಲಯಗಳಲ್ಲಿ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರಮುಖ ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಖ್ಯಾತ ತರಬೇತುದಾರ ಸೈಯದ್ ಖಲೀಲುಲ್ಲಾ ಕಾರ್ಯಗಾರ ನಡೆಸಿಕೊಡಲಿದ್ದು, LED ಪರದೆ ಹಾಗೂ ಕೈಪಿಡಿಯ ಮೂಲಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ.
ಜೂನ್ 28, ಆದಿತ್ಯವಾರ ಮಧ್ಯಾಹ್ನ 2:30ಕ್ಕೆ ಹೆಬ್ರಿಯ ಚೈತನ್ಯ ಸಭಾಂಗಣ, ಸಾಯಂಕಾಲ 4:00ಕ್ಕೆ ಅಜೆಕಾರಿಯ ಹೋಟೆಲ್ ರಚನಾ, 5:30ಕ್ಕೆ ಕಾರ್ಕಳ ಪುರಸಭಾ ವ್ಯಾಪ್ತಿಯ ಹೋಟೆಲ್ ಮಯೂರದಲ್ಲಿ ಆಯೋಜಿಸಲಾಗಿದೆ. ದಿನಾಂಕ 29, ಸೋಮವಾರ ಮಧ್ಯಾಹ್ನ 2:30ಕ್ಕೆ ಕುಕ್ಕುಂದೂರು ದೇವಿಕೃಪಾ ಸಭಾಭವನ, ಸಾಯಂಕಾಲ 4:00ಕ್ಕೆ ಬಜಗೋಳಿಯ ಹೋಟೆಲ್ ಚಿರಾಗ್, 5:30ಕ್ಕೆ ಬೆಳ್ಮಣ್ಣ್ ಹೋಟೆಲ್ ಸೂರಜ್ ಇಲ್ಲಿ ಆಯೋಜಿಸಲಾಗಿದೆ.
ಸಾರ್ವಜನಿಕರು ತಮ್ಮ ಮತದಾನದ ಹಕ್ಕನ್ನು ಉಳಿಸಿಕೊಳ್ಳಬೇಕಾದರೆ ಎಸ್.ಐ.ಆರ್. ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದು ಅನಿವಾರ್ಯವಾಗಿದ್ದು, ಪಕ್ಷದ ವತಿಯಿಂದ ಅವಕಾಶವನ್ನು ಕಲ್ಪಿಸಲಾಗಿದೆ. ಪಕ್ಷದ ಬಿಎಲ್ಎ-2, ವಾರ್ಡ್ ಅಧ್ಯಕ್ಷರು ಸೇರಿ ಒಂದು ವಾರ್ಡ್ನಿಂದ ಐದು ಜನ ಕಾರ್ಯಕರ್ತರು ಭಾಗವಹಿಸುವುದು ಕಡ್ಡಾಯವಾಗಿದ್ದು, ಸಾರ್ವಜನಿಕರೂ ಕೂಡ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕಾರ್ಕಳ ಮತ್ತು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶುಭದ ರಾವ್ ಮತ್ತು ಗೋಪಿನಾಥ್ ಭಟ್ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






