ಕಾಪು | ಕನ್ನಡದ ಅಸ್ಮಿತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ : ಸುಬ್ರಹ್ಮಣ್ಯ ಶೆಟ್ಟಿ

ಕಾಪು, ನ.25: ಕನ್ನಡ ಎನ್ನುವುದು ಭಾಷೆಯಾಗಿಯೇ ಉಳಿದಿಲ್ಲ. ಕನ್ನಡ ಎಂದರೆ ನಾಡು, ನುಡಿ, ನಡೆಯೂ ಹೌದು. ಕನ್ನಡಕ್ಕೆ ವ್ಯಾಪ್ತಿ ಇಲ್ಲ. ಬದುಕು ಮತ್ತು ಭರವಸೆಗಳ ನಡುವೆ ಕನ್ನಡತನವನ್ನು ಉಳಿಸಿಕೊಂಡು ಹೋಗಬೇಕು. ಇದರ ಭಾಗವಾಗಿ ಕನ್ನಡದ ಅಸ್ಮಿತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಉಡುಪಿ ಜಿಲ್ಲಾ ಕನ್ನಡ ಸಾತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದ್ದಾರೆ.
ಕಾಪು ತಾಲೂಕು ಕನ್ನಡ ಸಾತ್ಯ ಪರಿಷತ್ತು ಇದರ ವತಿಯಿಂದ ದುರ್ಗಾನಗರ ಸಮೀಪದ ಬಿಳಿಯಾರು ಶ್ರೀಉಮಾಮಹೇಶ್ವರ ದೇವಳದ ಆವರಣದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಏರ್ಪಡಿಸಿದ ತಿಂಗಳ ಸಡಗರ- ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಡಿಯಲ್ಲಿ ವೇದಮೂರ್ತಿ ಮಾಧವ ಭಟ್ರವರನ್ನು ಪತ್ನಿ ಸುಧಾ ಭಟ್ರೊಂದಿಗೆ ಸನ್ಮಾನಿಸಿ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ಕುರ್ಕಾಲು ಗ್ರಾಪಂ ಅಧ್ಯಕ್ಷ ಪ್ರಶಾಂತ್ ಪೂಜಾರಿ, ಗ್ರಾಪಂ ಉಪಾಧ್ಯಕ್ಷೆ ನತಾಲಿಯಾ ಮಾರ್ಟಿಸ್, ಕಸಾಪ ಉಡುಪಿ ಜಿಲ್ಲಾ ಸಹಕಾರ್ಯದರ್ಶಿ ಡಾ.ರಘು ನಾಯ್ಕ್, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಸಿದ್ದರು.
ಸ್ಥಳೀಯ ಸಂಯೋಜಕ ಭಾಸ್ಕರ್ ಆಚಾರ್ಯ ಬಿಳಿಯಾರು ಸನ್ಮಾನಿತರನ್ನು ಪರಿಚಯಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್, ಸಹ ಕಾರ್ಯದರ್ಶಿ ಕೃಷ್ಣಕುಮಾರ್ ರಾವ್ ಮಟ್ಟು, ಜಿಲ್ಲಾ ಸುತಿಯ ನರಸಿಂಹ ಮೂರ್ತಿ ರಾವ್ ಉಪಸ್ಥಿತರಿದ್ದರು. ಸದಸ್ಯ ಎಸ್.ಎಸ್.ಪ್ರಸಾದ್ ನಿರೂಪಿಸಿ ದರು. ಕಸಾಪ ಕಾರ್ಯದರ್ಶಿ ನೀಲಾನಂದ ನಾಯ್ಕ್ ವಂದಿಸಿದರು.







