ಕಾಪು | ರಾಷ್ಟ್ರಮಟ್ಟದ ಕರಾಟೆ: ಕ್ರೆಸೆಂಟ್ ವಿದ್ಯಾರ್ಥಿಗಳ ಸಾಧನೆ

ಕಾಪು, ನ.30: ಉಡುಪಿ ಬುಡೋಕಾನ್ ಸ್ಪೋರ್ಟ್ಸ್ ಕರಾಟೆ ಕರ್ನಾಟಕ ಇದರ ವತಿಯಿಂದ ಇತ್ತೀಚೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಹಾಲ್ ನಲ್ಲಿ ಆಯೋಜಿಸಲಾದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕಾಪು ಚಂದ್ರನಗರದ ಕ್ರೆಸೆಂಟ್ ಇಂಟರ್ ನ್ಯಾಶನಲ್ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.
ಶುಹೈಫ ಶೇಕ್ ಚಿನ್ನ, ಬೆಳ್ಳಿ, ಆಯಿಷಾ ಶಾನ್ವ ಚಿನ್ನ, ಕಂಚು,ಮುಹಮ್ಮದ್ ಶಾಮೀಲ್ ಬೆಳ್ಳಿ, ಕಂಚು, ಅಲೀಶ ಬೆಳ್ಳಿ, ಕಂಚು, ರಿಝ ಫಾತಿಮಾ 2 ಕಂಚು, ಮುಹಮ್ಮದ್ ಹಿಶಾಮ್ ಕಂಚು, ಅಲೀನಾ ಕಂಚು, ಫಾಯೆಕ್ ಕಂಚು, ರಿಫಾ ಫಾತಿಮ ಕಂಚಿನ ಪದಕಗಳನ್ನು ಪಡೆದಿದ್ದಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಸೀಫ್ ಯುಸೂಫ್ ಸಾಹೇಬ್, ಪ್ರಾಂಶುಪಾಲ ಅಕ್ಬರ್ ಅಲಿ, ಉಪಪ್ರಾಂಶುಪಾಲ ಗುರುದತ್, ಕರಾಟೆ ಶಿಕ್ಷಕ ಶಂಶುದ್ಧೀನ್ ಹಾಜರಿದ್ದರು.
Next Story





