ಕಲಾಸಂಗಮ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಪರ್ಕಳದ ವಿಘ್ನೇಶ್ವರ ಸಭಾಭವನದಲ್ಲಿ ಫೆ.23ರಂದು ನಡೆಯಲಿರುವ ಪರ್ಕಳ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ಸಂಭ್ರಮ ಕಲಾಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉದ್ಯಮಿ ಮೋಹನ್ ದಾಸ್ ನಾಯಕ್ ಹಾಗೂ ವೇದಿಕೆಯ ಪೋಷಕ ಪ್ರಕಾಶ್ ಶೆಣೈ ಬಿಡುಗಡೆಗೊಳಿಸಿದರು.
ಕೆಳ ಪರ್ಕಳದ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಹೋಟೆಲ್ ಉದ್ಯಮಿ ದೇವದಾಸ್ ನಾಯಕ್, ವೇದಿಕೆ ಅಧ್ಯಕ್ಷ ಸಂದೀಪ್ ನಾಯ್ಕ್ ಕಬ್ಯಾಡಿ, ಸದಸ್ಯರಾದ ಗಣೇಶ್ ಸಣ್ಣಕ್ಕಿಬೆಟ್ಟು, ಸುಧಾಕರ್ ನಾಯಕ್ ಕಬ್ಯಾಡಿ, ಅಶೋಕ್ ಸಣ್ಣಕ್ಕಿಬೆಟ್ಟು, ಸುಧೀರ್ ಕುಮಾರ್ ನಗರಬೆಟ್ಟು, ರಾಘವೇಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಅಭಯ್ ಉಪಸ್ಥಿತರಿದ್ದರು. ವೇದಿಕೆ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್ ಚಕ್ರತೀರ್ಥ ಕಾರ್ಯಕ್ರಮ ನಿರೂಪಿಸಿದರು.
Next Story





