ಕಣ್ಣಂಗಾರ್ : ವಾರ್ಷಿಕ ಜಲಾಲಿಯ್ಯ ಪೋಸ್ಟರ್ ಬಿಡುಗಡೆ

ಉಡುಪಿ, ಡಿ.15: ಕಣ್ಣಂಗಾರ್ ಬೇಂಗಳೆ ನೂರುಲ್ ಹುದಾ ಮಸೀದಿ ವತಿಯಿಂದ ನಡೆಯಲಿರುವ ನಅತೇ ಶರೀಫ್ ಮತ ಪ್ರಭಾಷಣ ಹಾಗೂ ವಾರ್ಷಿಕ ಜಲಾಲಿಯ್ಯ ಕಾರ್ಯಕ್ರಮದ ಪೋಸ್ಟರ್ ಅನ್ನು ಹಾಫಿಲ್ ಸಿರಾಜುದ್ದೀನ್ ಕಾಸಿಮಿ ಬಿಡುಗಡೆಗೊಳಿಸಿದರು.
ಕಣ್ಣಂಗಾರ್ ಕೇಂದ್ರ ಜುಮ್ಮಾ ಮಸೀದಿ ಅಧೀನದಲ್ಲಿರುವ ಎನ್.ಎಸ್. ರೋಡ್ ನೂರುಲ್ ಹುದಾ ಮಸೀದಿ ವಠಾರದಲ್ಲಿ ಜ.18 ಮತ್ತು 19ರಂದು ಈ ಕಾರ್ಯಕ್ರಮ ನಡೆಯಲಿದೆ. ಜ.18ರ ಮಗ್ರಿಬ್ ನಮಾಜಿನ ನಂತರ ಇಶ್ಕೇ ಮದೀನಾ ನಅತೇ ಶರೀಫ್ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮವನ್ನು ಕಣ್ಣಂಗಾರ್ ಜುಮಾ ಮಸೀದಿಯ ಖತೀಬ್ ಮಹಮ್ಮದ್ ಅಶ್ರಫ್ ಕಿನ್ಯಾ ಉದ್ಘಾಟಿಸಲಿದ್ದಾರೆ. ಕೇರಳದ ಪಂಡಿತ ಹಾಗೂ ವಾಗ್ಮಿ ಹಾಫಿಲ್ ಸಿರಾಜುದ್ದೀನ್ ಕಾಸಿಮಿ ಪತ್ತನಾಪುರಂ ಮುಖ್ಯ ಪ್ರಭಾಷಣ ಹಾಗೂ ಅಬ್ದುಲ್ ರಜಾಕ್ ಅಬ್ರಾರಿ, ಪತ್ತನಂತಿಟ್ಟ ಪ್ರಭಾಷಣಗೈಯಲ್ಲಿದ್ದಾರೆ.
ಜ.19ರಂದು ಮಗ್ರಿಬ್ ನಮಾಜಿನ ಬಳಿಕ ಸಯ್ಯದ್ ತಂಞಳ್ ನೇತೃತ್ವದಲ್ಲಿ ಜಲಾಲಿಯ್ಯ ಕಾರ್ಯಕ್ರಮ ನಡೆಯಲಿದೆ ಎಂದು ಮಸೀದಿ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.
Next Story





