ಕಾಪು | ಮನೆಗೆ ನುಗ್ಗಿ ನಗನಗದು ಕಳವು

ಕಾಪು, ಡಿ.6: ಕಾಪು ಕೋಟೆ ಗ್ರಾಮದ ಕಿನ್ನಿಗುಡ್ಡೆ ಬಳಿ ನಿವಾಸಿ ಪ್ರಭಾಕರ ಅಮೀನ್ ಅವರು ಮದುವೆ ಕಾರ್ಯಕ್ರಮಕ್ಕಾಗಿ ಕುಟುಂಬದ ಜೊತೆ ನ.26ರಂದು ಮನೆಗೆ ಬೀಗ ಹಾಕಿ ಮುಂಬೈಗೆ ತೆರಳಿದ್ದರು. ಡಿ.5ರಂದು ಮುಂಬೈನಿಂದ ವಾಪಸ್ಸು ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಕಬ್ಬಿಣದ ರಾಡ್, ಕಬ್ಬಿಣದ ಪಿಕ್ಕಾಸು ಹಾಗೂ ಕತ್ತಿಯನ್ನು ಉಪಯೋಗಿಸಿ ಮನೆಯ ಬಾಗಿಲನ್ನು ಒಡೆದು ಒಳಪ್ರವೇಶಿಸಿದ ಕಳ್ಳರು, ರೂಂನಲ್ಲಿದ್ದ 17,000ರೂ. ನಗದು ಹಾಗೂ 20ಸಾವಿರ ರೂ. ಮೌಲ್ಯದ ಚಿನ್ನದ ಉಂಗುರ, ಒಂದು ಜೊತೆ ಚಿನ್ನದ ಕಿವಿಯೋಲೆ, ಚಿನ್ನದ ಪೆಂಡೆಂಟ್ ಕಳವು ಮಾಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





