ಕಾಪು | ತಂದೆ ಮಗಳು ನಾಪತ್ತೆ

ಕಾಪು : ಉಳಿಯಾರಗೋಳಿ ಗ್ರಾಮದ ಕಲ್ಯಾ ಭರತ್ ನಗರ ನಿವಾಸಿ ದಿನೇಶ್ ಶೆಟ್ಟಿಗಾರ(45) ಹಾಗೂ ತನ್ನ 5 ವರ್ಷದ ಹೆಣ್ಣು ಮಗು ವಿಸ್ಮಿತ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಇವರು, ಸೆ.26ರ ತನ್ನ ಮಗುವಿನ ಹುಟ್ಟಿದ ಹಬ್ಬಕ್ಕಾಗಿ ಮಗಳಿಗೆ ಬಟ್ಟೆ ತೆಗೆದುಕೊಡಿಸುವುದಾಗಿ ಹೇಳಿ ಸೆ.25ರಂದು ಸಂಜೆ ಮನೆಯಿಂದ ಮಗು ಅನ್ವಿತಳನ್ನು ಕರೆದುಕೊಂಡು ಹೋದವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




