ಕಾಪು | ಮೆಡಿಕಲ್ ಔಷಧಿ ಸೇವಿಸಿ ಮಲಗಿದ್ದ ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಕಾಪು, ಡಿ.13: ವಿಪರೀತ ಕೆಮ್ಮು ಮತ್ತು ದಮ್ಮು ಕಾಯಿಲೆಗೆ ಮೆಡಿಕಲ್ ನಿಂದ ತಂದ ಔಷಧಿ ಸೇವಿಸಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಡಿ.12ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಉದ್ಯಾವರ ಗ್ರಾಮದ ಮಮತ ಆಚಾರ್ಯ ಎಂಬವರ ಮಗ ರಕ್ಷಿತ್ ಕುಮಾರ್(34) ಎಂದು ಗುರುತಿಸಲಾಗಿದೆ. ಇವರಿಗೆ ಸುಮಾರು 20 ದಿನದಿಂದ ವಿಪರೀತ ಕೆಮ್ಮು ಮತ್ತು ದಮ್ಮು ಕಾಯಿಲೆ ಇದ್ದು, ಮೆಡಿಕಲ್ ನಿಂದ ಔಷಧಿಯನ್ನು ತಂದು ಸೇವಿಸುತ್ತಿದ್ದರು. ರಾತ್ರಿ ಊಟ ಮಾಡಿ ಮಲಗಿದ್ದ ಇವರು, ಬೆಳಗ್ಗೆ ಏಳದೇ ಅಲ್ಲೇ ಮೃತಪಟ್ಟಿರುವುದು ತಿಳಿದು ಬಂದಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





