ಕಾರ್ಕಳ: 'ಅಟಲ್ ಸ್ಮರಣೆ' ಕಾರ್ಯಕ್ರಮ

ಕಾರ್ಕಳ: ಅಟಲ್ ಬಿಹಾರಿ ವಾಜಪೇಯಿ ಅವರು ವೈವಿಧ್ಯಮಯ ಪ್ರತಿಭೆ. ಅವರು ಕೇವಲ ರಾಜಕಾರಣಿಯಾಗಿ ರಲಿಲ್ಲ. ಪತ್ರಕರ್ತ, ಶ್ರೇಷ್ಠ ಸಂಸದೀಯ ಪಟು, ಅದ್ಭುತ ಕವಿಯಾಗಿದ್ದ ಅವರು ಮೌಲ್ಯಾಧಾರಿತ ರಾಜಕಾರಣದ ಪ್ರತೀಕವಾಗಿದ್ದರು ಎಂದು ರಾಷ್ಟ್ರೀಯ ಬಿಜೆಪಿ ಸಂಘಟನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಹೇಳಿದರು
ಅವರು ಬಿಜೆಪಿ ಕಾರ್ಕಳ ವತಿಯಿಂದ ಕಾರ್ಕಳ ಕುಕ್ಕುಂದುರು ಪಂಚಾಯತ್ ಮೈದಾನದಲ್ಲಿ ನಡೆದ 'ಅಟಲ್ ಸ್ಮರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
1951ರಲ್ಲಿ ಜನಸಂಘ ಸ್ಥಾಪನೆಯಾದ ದಿನದಿಂದಲೂ ಅವರು ರಾಷ್ಟ್ರದ ಸಮಗ್ರ ಅಭಿವೃದ್ಧಿಯ ತತ್ವಕ್ಕೆ ಬದ್ಧರಾಗಿದ್ದರು. ಅಧಿಕಾರದ ಹಪಹಪಿ ಇರಲಿಲ್ಲ. ಬರೋಬ್ಬರಿ 51 ವರ್ಷಗಳ ಕಾಲ ಸಕ್ರಿಯ ರಾಜನೀತಿಯಲ್ಲಿದ್ದರೂ, ಅವರು ಎಂದಿಗೂ ವೈಯಕ್ತಿಕ ಲಾಭಕ್ಕಾಗಿ ಅಥವಾ ಕುರ್ಚಿಗಾಗಿ ಹಾತೊರೆದವರಲ್ಲ. 13 ದಿನಗಳ ಸರಕಾರ ಬಿದ್ದಾಗಲೂ ಅವರು ಎದೆಗುಂದದೆ ದೇಶ ಸೇವೆ, ಸಂಘಟನಾ ಚಟುವಟಿಕೆ ಮುಂದುವರಿಸಿದ್ದರು.
ಶ್ರೇಷ್ಠ ವ್ಯಕ್ತಿತ್ವ, ಬದ್ಧತೆ ಇದ್ದರೇ ಎಂದಿಗೂ ಯಶಸ್ಸು ಕಟ್ಟಿಟ್ಟ ಬುತ್ತಿ. ದೇಶ ಮೊದಲು, ಪಕ್ಷ ಅನಂತರ ಎಂದು ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ವಾಜಪೇಯಿ ಅವರ ವ್ಯಕ್ತಿತ್ವ ನಮ್ಮೆಲ್ಲರಿಗೂ ದಾರಿದೀಪ ಎಂದರು.
ಗ್ರಾಮ ಗ್ರಾಮ ಗಳಲ್ಲಿ ಕಮಲ ಅರಳುತಿದೆ ಕೆಲವೆಡೆ ನಾವು ಸೋತಿರಬಹುದು ಮತೊಮ್ಮೆ ಕಮಲ ಅರಳಿಸುತ್ತೇವೆ ಇಡೀ ದೇಶದಲ್ಲಿ ಕಮಲ ಅರಳಿಸಿಯೇ ತಿರುತ್ತೇವೆ ಇಂದು ಅಟಲ್ ಬಿಹಾರಿ ವಾಜಪೇಯಿ ಶ್ರದ್ದಾಂಜಲಿ, ಪುಷ್ಪಾoಜಲಿ, ಮಾತ್ರವಲ್ಲ ಕಾರ್ಯoಜಲಿ ಅರ್ಪಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವಿ.ಸುನೀಲ್ ಕುಮಾರ್ .ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಬಿಜೆಪಿ ಹಿರಿಯರಾದ ಬೋಳ ಪ್ರಭಾಕರ್ ಕಾಮತ್, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಕಳ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್‌ನಲ್ಲಿರುವ ಅಟಲ್ ಅವರ ಮೂರ್ತಿಗೆ ಬಿ ಎಲ್ ಸಂತೋಷ್ ಹಾಗೂ ಇನ್ನಿತರ ಗಣ್ಯರು ಪುಷ್ಪಾರ್ಚನೆಗೈದರು. ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ದೇಶಭಕ್ತಿ ಬಿಂಬಿಸುವ ಸಮೂಹ ಗೀತೆಗಳ ಗಾಯನ ನಡೆಯಿತು. ವಿವಿಧ ಭಾವಭಕ್ತಿಗೀತಾ ಕಾರ್ಯಕ್ರಮಗಳು ಜರುಗಿದವು. ವಾಜಪೇಯಿ ಅವರ ಜೀವನ ಚರಿತ್ರೆಯನ್ನು ಬಿಂಬಿಸುವ ವಿಡಿಯೋ ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ, ಶಾಸಕ ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಶೆಟ್ಟಿ ಕುತ್ಯಾರು, ಕಾರ್ಕಳದ ಆರ್ ಎಸ್ ಎಸ್ ಮುಖಂಡ ಬೋಳ ಪ್ರಭಾಕರ್ ಕಾಮತ್, ಬಿಜೆಪಿ ಮುಖಂಡ ಮಣಿರಾಜ್ ಶೆಟ್ಟಿ, ಸೇರಿದಂತೆ ಹಿರಿಯ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪರಿಸರ ಪ್ರೇಮಿಯಾಗಿದ್ದ ಅಟಲ್ ಅವರ ನೆನಪಿನಲ್ಲಿ ಕಾರ್ಕಳದ ಅಟಲ್ ಬಿಹಾರಿ ವಾಜಪೇಯಿ ಪಾರ್ಕ್ ನಲ್ಲಿ ಬಿ ಎಲ್ ಸಂತೋಷ್, ಕೋಟ ಶ್ರೀನಿವಾಸ್ ಪೂಜಾರಿ, ಬೋಳ ಪ್ರಭಾಕರ್ ಕಾಮತ್ ಗಿಡ ನೆಡುವ ಮೂಲಕ ವರ್ಷಪೂರ್ತಿ ಮುಂದುವರಿಯುವ ಅಭಿಯಾನಕ್ಕೆ ಚಾಲನೆ ನೀಡಿದರು.
ವಿಶೇಷವಾಗಿ 8ನೇ ತರಗತಿಯ ಹೈಸ್ಕೂಲು ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ, ಅವುಗಳನ್ನು ಪೋಷಿಸುವ ಜವಾಬ್ದಾರಿ ನೀಡಲಾಯಿತು. 2500ಕ್ಕೂ ಅಧಿಕ ಕಾರ್ಯಕರ್ತರೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೋಸೆ ಕ್ಯಾಂಪ್ ಆಯೋಜಿಸಲಾಗಿತ್ತು. ಬಿಜೆಪಿ ಕ್ಷೇತ್ರಾಧ್ಯಕ್ಷ ನವಿನ್ ನಾಯಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ರವೀಂದ್ರ ಕುಕ್ಕುಂದೂರು, ಸತ್ಯಶಂಕರ ಶೆಟ್ಟಿ ಮುಂಡ್ಕೂರು ನಿರೂಪಿಸಿದರು.







