ಕಾರ್ಕಳ| ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ: ಯೋಗೀಶ್ ದೇವಾಡಿಗ

ಕಾರ್ಕಳ : ನಮ್ಮ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಹಾಗಾಗಿ ನಮ್ಮ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ಎಂದು ಪುರಸಭಾ ಅಧ್ಯಕ್ಷ ಯೋಗೇಶ್ ದೇವಾಡಿಗ ಹೇಳಿದರು.
ಅವರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ, ಅಧಿಕಾರಿಗಳ ಕಚೇರಿ ಉಡುಪಿ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಕಾರ್ಕಳ ಹಾಗೂ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಮಲೇರಿಯಾ ಡೆಂಗ್ಯೂ ಮಾಹಿತಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ ಎಚ್, ಮಲೇರಿಯ ವಿರೋಧಿ ಮಾಸಾಚರಣೆ ಹಾಗೂ ಮಲೇರಿಯ ಮತ್ತು ಡೆಂಗ್ಯೂ ಮಾಹಿತಿ ಕಾರ್ಯಾಗಾರದ ಬಗ್ಗೆ ಪ್ರಾಸ್ತಾವಿಕ ಮಾತುಗಳ ನ್ನಾಡಿದರು.
ಕಾರ್ಕಳ ತಾಲೂಕು ಆರೋಗ್ಯ ಅಧಿಕಾರಿಯಾಗಿರುವ ಡಾ. ಸಂದೀಪ್ ಕುಡ್ವ ಮಲೇರಿಯ ಮತ್ತು ಡೆಂಗ್ಯೂ ರೋಗದ ಲಕ್ಷಣಗಳು ಮತ್ತು ಹರಡುವಿಕೆಯ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ನೀಡಿದರು.
ತಾಲೂಕು ಶಿಕ್ಷಣಾಧಿಕಾರಿ ಸುಶೀಲ ಕೆ ಅವರು ವೈಯಕ್ತಿಕ ಸ್ವಚ್ಛತೆ ಕೈ ತೊಳೆಯುವ ವಿಧಾನಗಳು ಸೇರಿದಂತೆ ಮಾದಕ ವ್ಯಸನಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ತಾಲೂಕಿನ ಹಿರಿಯ ಆರೋಗ್ಯ ನಿರೀಕ್ಷಕರಾದ ವಸಂತ ಶೆಟ್ಟಿ, ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಕು| ಸಾಕ್ಷಿ ಜಿ, ಮಾ| ಮನು ಹೇಮನಗೌಡ ದಳವಾಯಿ ಉಪಸ್ಥಿತರಿದ್ದರು.
ಆಂಗ್ಲ ಭಾಷಾ ಶಿಕ್ಷಕ ಸುನಿಲ್ ಎಸ್ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಕಿ ಪ್ರಿಯಾ ಪ್ರಭು ವಂದಿಸಿದರು. ಸಮಾಜ ಶಾಸ್ತ್ರ ಉಪನ್ಯಾಸಕ ಪ್ರಭಾತ್ ರಂಜನ್ ನಿರೂಪಿಸಿದರು.







