ಕಾರ್ಕಳ | ಪೊಲೀಸ್ ಚೆಕ್ ಪೋಸ್ಟ್ ಉದ್ಘಾಟನೆ

ಕಾರ್ಕಳ : ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್ ಬಳಿ ಪೊಲೀಸ್ ಇಲಾಖೆಯ ಉಪಯೋಗಕ್ಕಾಗಿ ನಿರ್ಮಿಸಲಾದ ತನಿಖಾ ಠಾಣೆ( ಚೆಕ್ ಪೋಸ್ಟ್ )ಯನ್ನು ಕಾರ್ಕಳ ಉಪ ವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕರಾದ ಡಾ.ಹರ್ಷ ಪ್ರಿಯಂವದಾ ಉದ್ಘಾಟಿಸಿದರು. ದಾನಿಗಳಿಗೆ, ರೋಟರಿ ಕ್ಲಬ್ಬಿಗೆ ಗ್ರಾಮ ಪಂಚಾಯತ್ ಹಾಗೂ ಊರವರ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಸಂಪೂರ್ಣ ಮೂಲ ಸೌಲಭ್ಯದೊಂದಿಗೆ ಸುಸಜ್ಜಿತ ತನಿಖಾ ಠಾಣೆಯನ್ನು ನಿರ್ಮಿಸಿಕೊಟ್ಟ ರಶ್ಮಿ ಕನ್ಸ್ಟ್ರಕ್ಷನ್ ನ ಮಾಲಕ ವಿನೀಶ್ ರವರನ್ನು , ನೆಲಹಾಸಿಗೆ ಟೈಲ್ಸ್ ಅಳವಡಿಸಿದ ರೋಟರಿ ಕ್ಲಬ್ಬಿನ ಪರವಾಗಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರನ್ನು ಹಾಗೂ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್ ರವರನ್ನು ಇಲಾಖಾ ವತಿಯಿಂದ ಸಹಾಯಕ ಪೊಲೀಸ್ ಅಧೀಕ್ಷಕರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ವ್ರತ್ತ ನಿರೀಕ್ಷಕ ಮಂಜಪ್ಪ ಡಿ.ಆರ್.ಗ್ರಾಮಾಂತರ ಠಾಣೆಯ ಉಪನಿರೀಕ್ಷಕರಾದ ಪ್ರಸನ್ನ ಎಸ್.ಎನ್. ನಗರ ಠಾಣೆಯ ಮುರಳಿಧರ್ ನಾಯಕ್, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಸಮದ್ ಖಾನ್, ವಸಂತ್ ಎಂ, ಬಾಲಕೃಷ್ಣ ದೇವಾಡಿಗ,ಅರುಣ್ ಮಾಂಜ,ಚೇತನ್ ಕುಮಾರ್ ಹಾಗೂ ಪೋಲೀಸ್ ಸಿಬಂದಿ, ಗ್ರಾಮ ಪಂಚಾಯತ್ ಸದಸ್ಯರು, ಊರವರು ಉಪಸ್ಥಿತರಿದ್ದರು.





