ಕಾರ್ಕಳ | ಮುಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿ

ಕಾರ್ಕಳ: ಚಿರಾಯು ಕನ್ನಡ ಟಿವಿ, ನೆನಪು ಫೌಂಡೇಶನ್ (ರಿ.), ಕರ್ನಾಟಕ ವತಿಯಿಂದ ಆಯೋಜಿಸಲಾದ ರಾಷ್ಟ್ರಮಟ್ಟದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಯುವ ಸಾಧಕರಿಗೆ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಮಾಜ ಸೇವಕ ಮುಹಮ್ಮದ್ ಶರೀಫ್ ಅವರಿಗೆ ‘ರಾಷ್ಟ್ರೀಯ ಮಾಧ್ಯಮ ರತ್ನ’ ಪ್ರಶಸ್ತಿಗೆ ನೀಡಿ ಗೌರವಿಸಲಾಗುವುದು.
ಕನ್ನಡ ನಾಡು–ನುಡಿ, ಸಂಸ್ಕೃತಿ, ಸಾಹಿತ್ಯ, ಮಾಧ್ಯಮ, ಶಿಕ್ಷಣ, ಧಾರ್ಮಿಕ, ಕಲೆ ಹಾಗೂ ಸಮಾಜ ಸೇವೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿರುವ ಇವರಿಗೆ ರವಿವಾರ ಅಂಗವಾಗಿ ಡಿ.14 ರಂದು ಗೋವಾದ ಮಡಗಾಂವ್ ನಲ್ಲಿ ಮಡಗಾಂವಿನ ರವೀಂದ್ರ ಭವನದಲ್ಲಿ ಭವ್ಯ ಕಾರ್ಯಕ್ರಮದಲ್ಲಿ ತಮ್ಮ ದೀರ್ಘಕಾಲದ ಪತ್ರಕರ್ತ ಸೇವೆ, ಸಾಮಾಜಿಕ ಚಟುವಟಿಕೆಗಳಲ್ಲಿ ನೀಡಿರುವ ಕೊಡುಗೆ ಹಾಗೂ ಸ್ಥಳೀಯ–ಪ್ರಾದೇಶಿಕ ವಿಚಾರಗಳನ್ನು ಜವಾಬ್ದಾರಿಯುತವಾಗಿ ಸಮಾಜದ ಮುಂದೆ ತಂದುಕೊಟ್ಟ ಸೇವೆಯನ್ನು ಪರಿಗಣಿಸಿ ಆಯೋಜಕರು ಪ್ರಶಸ್ತಿಯನ್ನು ಪ್ರಧಾನ ಮಾಡಲಿರುವರು ಎಂದು ಆಯೋಜಕರಾದ ಚಿರಾಯು ಕನ್ನಡ ಟಿವಿ ಸಂಸ್ಥಾಪಕರಾದ ಡಾ. ಮಂಜುನಾಥ್ ಶಿವಕ್ಕನವರು ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಶ್ರೀ ಮಲ್ಲಿಕಾರ್ಜುನ ಅಪ್ಪಾಜಿ ಸುಕ್ಷೇತ್ರ ಮಹಲ್ ರೋಜ್, ಪ.ಪೂ.ಶ್ರೀ ಡಾ.ವಿದ್ಯಾನಂದ ಮಹಾಸ್ವಾಮಿಗಳು ಕಣವಿ ಹೊನ್ನಾಪುರ ಸಮ್ಮೇಳನಾಧ್ಯಕ್ಷ ಇಲ್ಯಾಸ್ ಇಬ್ರಾಹಿಂಸಾಬ್, ಕಲಬುರಗಿ ಕೇಂದ್ರ ಕಾರಾಗೃಹ ಮುಖ್ಯಅಧಿಕ್ಷಕರಾದ ಡಾ. ಅನಿತಾ ಆರ್., ರೇಣುಕಾ ಟ್ರ್ಯಾಕ್ಟರ್ಸ್ ಸ್ವರಾಜ್ ಕಂಪನಿ ಮಾಲಕ ಯುವ ಉದ್ಯಮಿ ವಾಯ್.ಎನ್.ಪಲ್ಲೇದ, ದಕ್ಷಿಣ ಗೋವಾ ಸಾಲಸೆಟ್ ತಾಲೂಕು ಕ.ಸಾ.ಪ. ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಸಾಮಾಜಿಕ ಹೋರಾಟಗಾರ್ತಿ ಪುಷ್ಪಾ ರಾಮಚಂದ್ರ ಕರಿಭೀಮಗೋಳ, ಬೆಂಗಳೂರು ಸಾಹಿತಿ ಡಾ. ಮಂಜುಳಾ ಶಂಕರ ಶಿರೂರ, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ(ರಿ) ಸಂಸ್ಥಾಪಕಿ, ಚೇತನ ಶಿವಕುಮಾರ್, ಸಿಂಧನೂರ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಭಾರತ್ ಸೈಟ್ ಗೈಡ್ಸ್ ಸಂಘಟನೆ, ಮುಖ್ಯಸ್ಥ ಬೀರಪ್ಪ ಶಂಭೋಜಿ, ಲೇಖಕಿ, ಛಾಯಾಗ್ರಾಹಕಿ ಕವಿತಾ ಗೋಪಾಲ್ ಚಿಕ್ಕಮಗಳೂರು, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರೀಟಾ ಎಮ್. ಡಿಸೋಜಾ, ಹುಬ್ಬಳ್ಳಿ ಆಯ್.ಬಿ.ಎಂ.ಆರ್. ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿ.ಜಿ.ಪಾಟೀಲ, ಹುಬ್ಬಳ್ಳಿ ಶ್ರೇಯಾ ಜನಸೇವಾ ಪೌಂಡೇಶನ್ ಟ್ರಸ್ಟ್(ರಿ) ರಾಜ್ಯಾದ್ಯಕ್ಷ ಡಾ.ಆರ್. ನಾರಾಯಣಸ್ವಾಮಿ, ರಿಪಬ್ಲಿಕ್ ಕನ್ನಡ ಟಿ.ವಿ. ದಾವಣಗೆರೆ ಜಿಲ್ಲಾ ವರದಿಗಾರ ವಿಠಲ್ ಕ್ಯಾರವಾಡ, ಹಿರಿಯ ಪತ್ರಕರ್ತ ಚಿಗಟೇರಿ ಕೋಟ್ರೇಶಿ ಕೊಟ್ಟೂರು ಭಾಗವಹಿಸಲಿದ್ದಾರೆ







