ಕಾರ್ಕಳ: ಕಾರು ಢಿಕ್ಕಿಯಾಗಿ ಪಾದಾಚಾರಿ ಮೃತ್ಯು
ಸಾಂದರ್ಭಿಕ ಚಿತ್ರ
ಕಾರ್ಕಳ: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.18ರಂದು ಸಂಜೆ ವೇಳೆ ಜೋಡುರಸ್ತೆ ಶ್ರೀಸಾಯಿ ಅಟೋವರ್ಕ್ ಗ್ಯಾರೆಜ್ ಎದುರು ನಡೆದಿದೆ.
ಮೃತರನ್ನು ಜೋಡುರಸ್ತೆಯ ನಿವಾಸಿ ಮಹಾಬಲ ಮೊಯಿಲಿ(86) ಎಂದು ಗುರುತಿಸಲಾಗಿದೆ. ಇವರು ಹಿರ್ಗಾನ ಕಡೆಯಿಂದ ತನ್ನ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದು, ಈ ವೇಳೆ ಹಿರ್ಗಾನ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು, ಮಹಾಬಲ ಮೊಯಿಲಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಕಾರ್ಕಳ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story





