ಕಾರ್ಕಳ : ರೋಟರಿ ಕ್ಲಬ್ ವತಿಯಿಂದ ‘ಪಲ್ಸ್ ಪೋಲಿಯೊ‘ ದಿನಾಚರಣೆ

ಕಾರ್ಕಳ : ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿಯವರಿಂದ ರಾಷ್ಟ್ರೀಯ ಪಲ್ಸ್ ಪೊಲೀಯೋ ದಿನಾಚರಣೆಯ ಪ್ರಯುಕ್ತ ಕೂಕ್ಕುಂದೂರು ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ 5 ವರ್ಷದ ಒಳಗಿನ ಮಕ್ಕಳಿಗೆ ಪೊಲೀಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೂಕ್ಕುಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಶಿಕಲಾ ಬಂಗೇರ ನೆರವೇರಿಸಿ ಶುಭ ಹಾರೈಸಿದರು. ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾll ಭರತೇಶ್ ರೋಟರಿ ಸಂಸ್ಥೆಯು ಕಳೆದ ನಲ್ವತ್ತು ವರ್ಷಗಳಿಂದ ಸರಕಾರ ದೊಂದಿಗೆ ಪೊಲೀಯೋ ನಿರ್ಮೂಲನ ಕಾರ್ಯ ಮಾಡುತ್ತಿದ್ದು , ‘ಪೊಲೀಯೋ ಮುಕ್ತ ಭಾರತ’ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೂ ನೆರೆಯ ರಾಷ್ಟ್ರಗಳಲ್ಲಿ ಪೊಲೀಯೋ ಕಂಡು ಬಂದಿರುವು ದರಿಂದ ನಾವೂ ಕೂಡಾ ಅದರ ವಿರುದ್ದ ಹೋರಾಡುವ ಅಗತ್ಯವಿದೆ ಎಂದು ಹೇಳುತ್ತಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಕೊಂಡಾಡಿದರು. ಪ್ರಾಥಮಿಕ ಅರೋಗ್ಯ ಘಟಕದ ವೈಧ್ಯಾಧಿಕಾರಿ ಡಾll ವಿದ್ಯಾಶ್ರೀ ಸ್ವಾಗತಿಸಿ ಕೆಲವು ಬೇಡಿಕೆಗಳನ್ನು ರೋಟರಿಯವರ ಮುಂದಿಟ್ಟರು. ರೋಟರಿ ಅಧ್ಯಕ್ಷ ಸುರೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು, ಪಂಚಾಯತ್ ಸದಸ್ಯರಾದ ನಕ್ರೆ ಅಂತೋನಿ ಡಿಸೋಜ ಹಾಗೂ ರೀನಾ ಕ್ಯಾತರಿನ್ ಫೆರ್ನಾಂಡಿಸ್, ಅಣ್ಣಪ್ಪ ನಕ್ರೆ ಉಪಸ್ಥಿತರಿದ್ದರು.
ಸಿಬ್ಬಂದಿ ಕುಮುದಾವತಿ ಕಾರ್ಯಕ್ರಮ ನಿರೂಪಣೆ ಮಾಡಿದರು, ಅರ್ಚನಾ ಹಾಗೂ ಇತರರು ಸಹಕರಿಸಿದರು. ಫಲಾನುಭವಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.





