ಕಾರ್ಕಳ: ಡಿಜಿಟಲ್ ಇ ಸ್ಟ್ಯಾಂಪ್ ಕುರಿತ ಕಾರ್ಯಾಗಾರ

ಕಾರ್ಕಳ: ನೋಂದಣಿ ಮತ್ತು ಮುದ್ರಾಂಕ ಇಲಾಖಾ ವತಿಯಿಂದ ಡಿಜಿಟಲ್ ಇ ಸ್ಟ್ಯಾಂಪ್ ಕುರಿತು ದಸ್ತಾವೇಜು ಬರಹಗಾರರು, ವಕೀಲರು, ಸಹಕಾರಿ ಸಂಸ್ಥೆಗಳು ಹಾಗೂ ಸಾರ್ವಜನಿಕರಿಗೆ ಸೋಮವಾರ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಕಾರ್ಕಳ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ನೋಂದಣಿ ಸಂಬಂಧಿತ ಚಟುವಟಿಕೆಗಳಿಗೆ ಹಾಗೂ ಇನ್ನಿತರ ಸಾರ್ವಜನಿಕ ಕೆಲಸ ಕಾರ್ಯಗಳಿಗೆ ಡಿಜಿಟಲ್ ಇ ಸ್ಟ್ಯಾಂಪ್ ಪಡೆಯುವ ಬಗೆಗಿನ ಕಾರ್ಯವಿಧಾನಗಳು ಮತ್ತು ಇತರ ಅವಶ್ಯಕ ವಿಷಯಗಳ ಬಗ್ಗೆ ಇಲಾಖಾ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಯವರು ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ವಕೀಲರು, ದಸ್ತಾವೇಜು ಬರಹಗಾರರು, ಸಾರ್ವಜನಿಕರು, ಸಹಕಾರಿ ಸಂಘಗಳ ವ್ಯವಸ್ಥಾಪಕರು ಹಾಗೂ ಕಾರ್ಕಳ ಉಪನೋಂದಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Next Story





