Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕರ್ನಾಟಕ ಕ್ರೀಡಾಕೂಟ: ಮಡಿಸಾಲು...

ಕರ್ನಾಟಕ ಕ್ರೀಡಾಕೂಟ: ಮಡಿಸಾಲು ಹೊಳೆಯಲ್ಲಿ ಕಯಾಕಿಂಗ್ ಸ್ಪರ್ಧೆ

4 ಚಿನ್ನದ ಪದಕ ಗೆದ್ದ ಬೆಂಗಳೂರು ನಗರದ ಸಮರಾ ಚಾಕೋ

ವಾರ್ತಾಭಾರತಿವಾರ್ತಾಭಾರತಿ17 Jan 2025 8:00 PM IST
share
ಕರ್ನಾಟಕ ಕ್ರೀಡಾಕೂಟ: ಮಡಿಸಾಲು ಹೊಳೆಯಲ್ಲಿ ಕಯಾಕಿಂಗ್ ಸ್ಪರ್ಧೆ

ಉಡುಪಿ, ಜ.17: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಪ್ರಾರಂಭಗೊಂಡ ಕರ್ನಾಟಕ ಕ್ರೀಡಾಕೂಟ-2025ರ ಮೊದಲ ಸ್ಪರ್ಧೆಯಾದ ಮಹಿಳೆಯರ ಕಯಾಕಿಂಗ್‌ನಲ್ಲಿ ನಿರೀಕ್ಷೆಯಂತೆ ಬೆಂಗಳೂರು ನಗರ ತಂಡದ ರಾಷ್ಟ್ರೀಯ ಅಥ್ಲೀಟ್ ಸಮರಾ ಎ.ಚಾಕೋ ತಾನು ಸ್ಪರ್ಧಿಸಿದ ನಾಲ್ಕರಲ್ಲೂ ಜಯಗಳಿಸುವ ಮೂಲಕ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು ಹೊಸ ದಾಖಲೆ ಬರೆದರು.

ಬಹ್ಮಾವರ ತಾಲೂಕಿನ ಹೇರೂರು ಗ್ರಾಮದ ಮಡಿಸಾಲು ಹೊಳೆಯಲ್ಲಿ ನಡೆದ ಮಹಿಳೆಯರ ಕಯಾಕಿಂಗ್‌ನ 200ಮೀ. ಸಿಂಗಲ್ ಹಾಗೂ ಡಬಲ್ ಅಲ್ಲದೇ 500ಮೀ. ಸಿಂಗಲ್ ಹಾಗೂ ಡಬಲ್‌ನಲ್ಲಿ ಸಮರಾ ಅವರೇ ದೋಣಿಯನ್ನು ವೇಗವಾಗಿ ಹುಟ್ಟುಹಾಕಿ ಮೊದಲಿಗರಾಗಿ ಗುರಿಮುಟ್ಟುವ ಮೂಲಕ ಮೊದಲ ದಿನದ ನಾಲ್ಕೂ ಚಿನ್ನದ ಪದಕಗಳನ್ನು ಗೆದ್ದುಕೊಂಡರು.

ಜ.28ರಿಂದ ಉತ್ತರ ಖಂಡದಲ್ಲಿ ನಡೆಯುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಕಯಾಕಿಂಗ್‌ನಲ್ಲಿ ಸ್ಪರ್ಧಿಸಲು ಅಭ್ಯಾಸ ನಡೆಸುತ್ತಿರುವ ಸಮರಾ ಚಾಕೋ ಅವರು ಸಿಂಗಲ್ (ಕೆ-1)ನಲ್ಲಿ ವೇಗವಾಗಿ ಉಳಿದೆಲ್ಲಾ ಸ್ಪರ್ಧಿಗಳನ್ನು ಹಿಮ್ಮೆಟ್ಟಿಸಿ ಭಾರೀ ಅಂತರದಲ್ಲಿ ಮೊದಲಿಗರಾಗಿ ಗುರಿಮುಟ್ಟಿದರೆ, ಡಬಲ್ಸ್ (ಕೆ-2)ನಲ್ಲಿ ಹರಿಣಿ ಜೊತೆ ಇದೇ ಸಾಧನೆಯನ್ನು ಪುನರಾವರ್ತಿಸಿದರು.

ಈ ಮೂಲಕ ಅವರು ರಾಷ್ಟ್ರೀಯ ಕ್ರೀಡಾಕೂಟದಲ್ಲೂ ರಾಜ್ಯಕ್ಕೆ ಪದಕ ಗೆಲ್ಲಿಸಿಕೊಡುವ ಆತ್ಮವಿಶ್ವಾಸವನ್ನು ವೃದ್ಧಿಸಿ ಕೊಂಡರು. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ ಹಾಗೂ ಮಂಗಳೂರಿನ ಯಾವುದೇ ಎದುರಾಳಿ ಅವರಿಗೆ ಇಂದು ಸರಿಸಾಟಿಯಾಗಿರಲಿಲ್ಲ.

500ಮೀ.ಕೆ-1: ಇಂದು ಮೊದಲು ನಡೆದ 500ಮೀ. ಕೆ-1 ಸ್ಪರ್ಧೆಯಲ್ಲಿ ಸಮರಾ ಎ.ಚಾಕೋ ಅವರು ತಾನು ಹುಟ್ಟು ಹಾಕಿದ ದೋಣಿಯನ್ನು 2.50ನಿ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿಸಿದರೆ, ಬೆಂಗಳೂರು ಗ್ರಾಮಾಂತರವನ್ನು ಪ್ರತಿನಿಧಿ ಸಿದ ಹರಿಣಿ ಎಸ್. ಅವರು 3.05ನಿ.ಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪದಕ ಹಾಗೂ ಕೋಲಾರದ ಅದ್ವಿತಾ ತನ್ವಾನಿ ಅವರು 3.10ನಿ.ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು.

500ಮೀ.ಕೆ-2: 500ಮೀ. ಡಬಲ್‌ನಲ್ಲಿ ಸಮರಾ ಚಾಕೋ ಹಾಗೂ ಹರಿಣಿ ಎಸ್. ಅವರು 2.45ನಿ.ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿಸಿದರೆ, ಬೆಂಗಳೂರು ಗ್ರಾಮಾಂತರದ ಎಂ.ತೇಜಶ್ರಿ ಹಾಗೂ ಅದ್ವಿತಾ ತನ್ವಾನಿ ಅವರು 2.56ನಿ.ಗಳೊಂದಿಗೆ ಬೆಳ್ಳಿ ಪದಕವನ್ನೂ ಮಂಗಳೂರಿನ ಅಭ್ಯತಾ ಆಗೂ ಅವ್ಯಾ ಬಿ.ಮನು ಅವರು 3.05ನಿ.ಗಳ ಸಾದನೆಯೊಂದಿಗೆ ಕಂಚಿನ ಪದಕವನ್ನು ಗೆದ್ದು ಕೊಂಡರು.

200ಮೀ.ಕೆ-1: ಮಹಿಳೆಯರ 200ಮೀ. ಕೆ-1 ಸ್ಪರ್ಧೆಯಲ್ಲಿ ಸಮರಾ ಚಾಕೋ ಅವರು 1:18ನಿ.ದಲ್ಲಿ ವೇಗವಾಗಿ ಗುರಿ ಮುಟ್ಟುವ ಮೂಲಕ ಮೂರನೇ ಚಿನ್ನದ ಪದಕವನ್ನು ಗೆದ್ದುಕೊಂಡರು. ಅವರ ನಂತರದ ಬೆಳ್ಳಿ ಪದಕವನ್ನು ಬೆಂಗಳೂರು ಗ್ರಾಮಾಂತರದವನ್ನು ಪ್ರತಿನಿಧಿಸಿದ ಹರಿಣಿ ಎಸ್. 1.32ಸೆ.ಗಳಲ್ಲಿ ಗುರಿಮುಟ್ಟಿ ಗೆದ್ದುಕೊಂಡರು. ಕಂಚಿನ ಪದಕವು 1.35ನಿ. ಗಳಲ್ಲಿ ಗುರಿಮುಟ್ಟಿದ ಚಿತ್ರದುರ್ಗದ ಆದ್ಯಾಕುಮಾರ್ ಪಾಲಾಯಿತು.

200ಮೀ.ಕೆ-2: 200 ಮೀ. ಕೆ-2 ಸ್ಪರ್ಧೆಯನ್ನು ಸಹ ಸಮರಾ ಚಾಕೋ ಹಾಗೂ ಹರಿಣಿ ಎಸ್. ಅವರೇ ಗೆದ್ದುಕೊಂಡರು. ಅವರು 1.24ನಿ.ಗಳಲ್ಲಿ ಮೊದಲಿಗರಾಗಿ ಗುರಿಮುಟ್ಟಿದರು.ಬೆಂಗಳೂರಿನ ಎಂ.ತೇಜಶ್ರಿ ಹಾಗೂ ಅದ್ವಿತಾ ತನ್ವಾನಿ ಅವರು 1:32ನಿ.ಗಳಲ್ಲಿ ಎರಡನೇಯವರಾಗಿ ಗುರಿ ತಲುಪಿ ಬೆಳ್ಳಿ ಪದಕ ಹಾಗೂ ಮಂಗಳೂರಿನ ಅಭ್ಯತಾ ಆಗೂ ಅವ್ಯಾ ಬಿ.ಮನು ಅವರು 1.35ನಿ.ಗಳ ಸಾಧನೆಯೊಂದಿಗೆ ಕಂಚಿನ ಪದಕವನ್ನು ಗೆದ್ದು ಕೊಂಡರು.

ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‌ನ ಜಂಟಿ ಕಾರ್ಯದರ್ಶಿ ಶಿವಾನಂದ, ಕರ್ನಾಟಕ ಕಯಾಕಿಂಗ್ ಆ್ಯಂಡ್ ಕೆನೋಯಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕ್ಯಾ.ದಿಲೀಪ್ ಕುಮಾರ್ ಅವರು ವಿಜೇತರಿಗೆ ಪದಕಗಳನ್ನು ವಿತರಿಸಿದರು.

ನಾಳೆ ಬೆಳಗ್ಗೆ 8 ಗಂಟೆಗೆ ಇಂದು ನಡೆಯಬೇಕಿದ್ದು, ಉದ್ಘಾಟನಾ ಕಾರ್ಯಕ್ರಮದ ನಿಮಿತ್ತ ಮುಂದೂಡಲಾದ ಪುರುಷರ 200 ಹಾಗೂ 500ಮೀ. ಕೆ-1, ಕೆ-2 ಸ್ಪರ್ಧೆಗಳು ನಡೆಯಲಿದೆ. ಅಲ್ಲದೇ ದಿನದಲ್ಲಿ ನಿಗದಿಯಾದ 200ಮೀ. ಹಾಗೂ 500ಮೀ. 10+2 ಮಿಕ್ಸೆಡ್ ಡ್ರ್ಯಾಗನ್ ಬೋಟ್ ಸ್ಪರ್ಧೆಗಳು ಸಹ ನಾಳೆ ನಡೆಯಲಿವೆ ಎಂದು ಸಂಸ್ಥೆಯ ಅಧಿಕಾರಿ ಗಳು ತಿಳಿಸಿದ್ದಾರೆ.













share
ವಾರ್ತಾಭಾರತಿ
ವಾರ್ತಾಭಾರತಿ
Next Story
X