ಕಸಾಪದಿಂದ ಹಿರಿಯ ಶಿಕ್ಷಕ, ಪ್ರತಿಪರ ಕೃಷಿಕರಿಗೆ ಸನ್ಮಾನ

ಶಿರ್ವ, ನ.27: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ನವೆಂಬರ್ ತಿಂಗಳ ಸಡಗರ, ಹಿರಿಯರೆಡೆಗೆ ಸಾಹಿತ್ಯದ ನಡಿಗೆ ಕಾರ್ಯಕ್ರಮದಲ್ಲಿ ಪಡುಬೆಳ್ಳೆ ಪಾಂಬೂರು ಹಿರಿಯ ನಿವೃತ್ತ ಶಿಕ್ಷಕ ಮೌರಿಸ್ ನೊರೋನ್ಹಾ(ಮಲ್ಲ ಮಾಸ್ಟರ್) ಮತ್ತು ಪತ್ನಿ ಮರಿಯ ಲಿಲ್ಲಿ ನೊರೋನ್ಹಾ ಅವರನ್ನು ಪಾಂಬೂರು ಅಂಚೆ ಕಛೇರಿ ಸಮೀಪದ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕ ಸ್ಯಾಮ್ಸನ್ ನೊರೋನ್ಹಾ ಅವರನ್ನೂ ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಜಿಲ್ಲಾ ಕೋಶಾಧ್ಯಕ್ಷ ಮನೋಹರ್ ಪಿ., ಕಸಾಪ ಜಿಲ್ಲಾ ಪ್ರತಿನಿಧಿ ಕಟ್ಟಂಗೇರಿ ದೇವದಾಸ್ ಹೆಬ್ಬಾರ್ ಶುಭ ಹಾರೈಸಿದರು.
ಅಧ್ಯಕ್ಷತೆಯನ್ನು ಕಸಾಪ ಕಾಪು ತಾಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಸಿದ್ದರು. ಕಸಾಪ ಜಿಲ್ಲಾ ಮಾಧ್ಯಮ ಪ್ರತಿನಿಧಿ ನರಸಿಂಹಮೂರ್ತಿ ರಾವ್, ಸದಸ್ಯರುಗಳಾದ ಡೋಮಿಯನ್ ಆರ್.ನೊರೋನ್ಹಾ, ಸುಧಾಕರ ಪೂಜಾರಿ, ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಲೆ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ಬೆಳ್ಳೆ ಪಟೇಲ್ ದಯಾನಂದ ಶೆಟ್ಟಿ, ಶಿರ್ವ ರೋಟರಿ ಟ್ರಸ್ಟ್ ಅಧ್ಯಕ್ಷ ಲೂಕಾಸ್ ಡಿಸೋಜ ಉಪಸ್ಥಿತರಿದ್ದರು.
ಕಸಾಪ ಕಾಪು ತಾಲೂಕು ಘಟಕದ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿದರು. ಕಸಾಪ ತಾಲೂಕು ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ವಂದಿಸಿದರು.






