ಕೊಲ್ಲೂರಿನಲ್ಲಿ ಕೇರಳದ ಯುವತಿ ಆತ್ಮಹತ್ಯೆ

ಕೊಲ್ಲೂರು: ಜು.19ರಂದು ಸಂಜೆ ಕೊಲ್ಲೂರಿನಲ್ಲಿ ಲಾಡ್ಜ್‌ನಲ್ಲಿ ರೂಮು ಪಡೆದಿದ್ದ ಕೇರಳದ ಕೊಟ್ಟಾಯಂ ಜಿಲ್ಲೆಯ ಧನ್ಯಶ್ರೀ ಎನ್. (35) ಎಂಬ ಯುವತಿ ಜು.21ರಂದು ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಮಂಗಳವಾರ ಬೆಳಗಿನಿಂದ ಧನ್ಯಶ್ರೀ ರೂಮಿನಿಂದ ಹೊರಗೆ ಬಾರದಿರುವುದನ್ನು ಗಮನಿಸಿದ ರೂಮ್‌ಬಾಯ್ ರೂಮಿನ ಹಿಂಬದಿಯ ಕಿಟಿಕಿ ತೆರೆದು ನೋಡಿದಾಗ ಅವರು ಫ್ಯಾನ್‌ಗೆ ಸೀರೆ ಕಟ್ಟಿಗೆ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದರು. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




