ಬೈಂದೂರಿನಲ್ಲಿ ಕಿಶೋರ ಯಕ್ಷಗಾನ ಕಾರ್ಯಕ್ರಮ ಉದ್ಘಾಟನೆ

ಬೈಂದೂರು: ಬೈಂದೂರಿನ ನಾಲ್ಕು ಶಾಲೆಗಳ ಕಿಶೋರ ಯಕ್ಷಗಾನ ಪ್ರದರ್ಶನ ಶನಿವಾರ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ರಂಗಮಂಟಪದಲ್ಲಿ ಉದ್ಘಾಟನೆಗೊಂಡಿತು.
ಹಿರಿಯರಾದ ವಿಶ್ವೇಶ್ವರ ಅಡಿಗರು ಮಾತನಾಡಿ, ಯಕ್ಷಗಾನ ಸುಂದರ ವೇಷಭೂಷಣ, ಕುಣಿತ, ಅಭಿನಯ, ಮಾತುಗಾರಿಕೆ ಎಲ್ಲವನ್ನೂ ಒಳಗೊಂಡ ಪರಿಪೂರ್ಣ ಕಲಾಪ್ರಕಾರ. ವಿದ್ಯಾರ್ಥಿಗಳು ಇದರಲ್ಲಿ ತರಬೇತಿ ಪಡೆಯುವದರಿಂದ ಅವರ ಸರ್ವಾಂಗೀಣ ಪ್ರಗತಿಯಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಜಗನ್ನಾಥ ಶೆಟ್ಟಿ ನಾಕಟ್ಟೆ ಉದ್ಘಾಟಿಸಿದರು. ಜಯಾನಂದ ಹೋಬಳಿದಾರ್ ಅಧ್ಯಕ್ಷತೆ ವಹಿಸಿದ್ದರು. ಉಮೇಶ ಬಿ., ಸತೀಶ ಶೆಟ್ಟಿ, ನಾಗೇಂದ್ರ ದೇವಾಡಿಗ, ಶಾಲಾ ಉಪ ಪ್ರಾಂಶುಪಾಲ ಪದ್ಮನಾಭ, ನಾರಾಯಣ ಎಂ.ಹೆಗಡೆ ಮುಖ್ಯ ಅತಿಥಿಗಳಾಗಿದ್ದರು.
ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುರೇಶ ಬಟವಾಡಿ ಸ್ವಾಗತಿಸಿದರು. ಪ್ರಭಾಕರ ಎಸ್. ವಂದಿಸಿದರು. ಅಧ್ಯಾಪಕ ರವೀಂದ್ರ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗುರು ನರಸಿಂಹ ತುಂಗ ಉಪಸ್ಥಿತರಿದ್ದರು.
ಸರಕಾರಿ ಪ್ರೌಢಶಾಲೆ ಕಂಬದಕೋಣೆ ಇಲ್ಲಿಯ ವಿದ್ಯಾರ್ಥಿಗಳಿಂದ ಪ್ರಶಾಂತ್ ಮಯ್ಯ ನಿರ್ದೇಶನದಲ್ಲಿ ’ಸುಧನ್ವಾರ್ಜುನ’, ಬೈಂದೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಉಪ್ಪುಂದ ಗಣೇಶ್ ನಿರ್ದೇಶನದಲ್ಲಿ ’ರತ್ನಾವತಿ ಕಲ್ಯಾಣ’ ಪ್ರಸಂಗ ಪ್ರಸ್ತುತಗೊಂಡಿತು.





