ಉಡುಪಿ: ನ.25ರಿಂದ ಕಿಶೋರ ಯಕ್ಷಗಾನ ಸಂಭ್ರಮ-2025 ಪ್ರಾರಂಭ

ಉಡುಪಿ: ಉಡುಪಿ ಜಿಲ್ಲೆಯ 94 ಪ್ರೌಢಶಾಲೆಗಳ ಯಕ್ಷಗಾನ ಪ್ರದರ್ಶನವು ನ.25ರಿಂದ ಪ್ರಾರಂಭಗೊಂಡು ಡಿಸೆಂಬರ್ 31ರ ವರೆಗೆ ಉಡುಪಿ, ಕಾಪು, ಕುಂದಾಪುರ ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಥಳೀಯ ಶಾಸಕರ ಸಹಕಾರದೊಂದಿಗೆ ನಡೆಯಲಿದೆ.
ಈ ಬಾರಿಯ ಯಕ್ಷ ಸಂಭ್ರಮ ಜಿಲ್ಲೆಯ 12 ಕಡೆಗಳಲ್ಲಿ ಪ್ರದರ್ಶನ ಗೊಳ್ಳಲಿದೆ. ಈ ಬಾರಿ 41 ಗುರುಗಳು ಯಕ್ಷಗಾನವನ್ನು ಕಲಿಸುತ್ತಿದ್ದು, 3000ಕ್ಕೂ ಮೇಲ್ಪಟ್ಟು ವಿದ್ಯಾರ್ಥಿಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿರುವರು.
ಈ ಬಾರಿಯ ಕಿಶೋರ ಯಕ್ಷ ಸಂಭ್ರಮದ ಉದ್ಘಾಟನೆ ನಾಳೆ ಸಂಜೆ 6:30ಕ್ಕೆ ಬ್ರಹ್ಮಾವರ ಬಂಟರ ಭವನದ ಮುಂಭಾಗದಲ್ಲಿ ನಡೆಯಲಿದೆ. ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ವಿದ್ಯಾರ್ಥಿಗಳ ಯಕ್ಷಗಾನ ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸ್ಥಳೀಯ ಗಣ್ಯರಾದ ಬಿ.ಭುಜಂಗ ಶೆಟ್ಟಿ, ಬಿಜು ಜಿ.ನಾಯರ್, ಬಿ.ಎನ್. ಶಂಕರ ಪೂಜಾರಿ, ಜ್ಞಾನವಸಂತ ಶೆಟ್ಟಿ, ಬೈಕಾಡಿ ಸುಪ್ರಸಾದ ಶೆಟ್ಟಿ, ಧನಂಜಯ ಅಮೀನ್, ಅಶೋಕ್‌ಕುಮಾರ್ ಶೆಟ್ಟಿ ಮೈರ್ಮಾಡಿ, ರಾಜೇಶ್ ಶೆಟ್ಟಿ ಬಿರ್ತಿ, ಪ್ರತಾಪ್ ಹೆಗ್ಡೆ ಮಾರಾಳಿ ಉಪಸ್ಥಿತರಿರುವರು ಎಂದು ಯಕ್ಷ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.
ಉದ್ಘಾಟನೆಯ ಬಳಿಕ ಎಸ್‌ಎಂಎಸ್ ಇಂಗ್ಲೀಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ‘ವೀರ ವೃಷಸೇನ’ ಯಕ್ಷಗಾನ ನರಸಿಂಹ ತುಂಗರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ.







