ಕೊಲ್ಲೂರು: ಜಡ್ಕಲ್ ‘ಗ್ರೀನ್ ಲಗೂನ್ ರಿಟ್ರೀಟ್’ ರೆಸಾರ್ಟ್‌ಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭೇಟಿ

ಕುಂದಾಪುರ: ಯುನಿಟಿ ಗ್ರೂಪ್ ವತಿಯಿಂದ ಕೊಲ್ಲೂರು ಸಮೀಪದ ಜಡ್ಕಲ್ ಕಾನ್ಕಿ ರಸ್ತೆಯಲ್ಲಿ ನಿರ್ಮಿಸಲಾಗಿರುವ ‘ಗ್ರೀನ್ ಲಗೂನ್ ರಿಟ್ರೀಟ್’ ರೆಸಾರ್ಟ್ ಗೆ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬುಧವಾರ ಭೇಟಿ ನೀಡಿದರು.
ನಂತರ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ ಅವರು, ನಮ್ಮ ಕ್ಷೇತ್ರದಲ್ಲಿ ವಿಶಿಷ್ಠ, ಅಂತರಾಷ್ಟ್ರೀಯ ಮಟ್ಟದ ‘ಗ್ರೀನ್ ಲಗೂನ್ ರಿಟ್ರೀಟ್’ ರೆಸಾರ್ಟ್ ಸ್ಥಾಪನೆಯಾಗಿರುವುದು ಸಂತೋಷವಾಗಿದೆ. ಇದರಿಂದ ಪ್ರವಾಸೋದ್ಯಮ ಬೆಳೆಯುತ್ತದೆ ಮತ್ತು ಸ್ಥಳೀಯರಿಗೆ ಉದ್ಯೋಗ ಸೃಷಿಯಾಗುತ್ತದೆ. ಇತಂಹ ರೆಸಾರ್ಟ್ ಸ್ಥಾಪನೆ ಮಾಡಿದ ಯುನಿಟಿ ಗ್ರೂಪ್ ಆಡಳಿತ ನಿರ್ದೇಶಕ ಉಸ್ಮಾನ್ ಹಂಗಳೂರು ಅವರು ಅಭಿನಂದನಾರ್ಹರು ಎಂದು ಪ್ರಶಂಸಿದರು.
ಈ ಸಂದರ್ಭ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಯುನಿಟಿ ಗ್ರೂಪ್ ಆಡಳಿತ ನಿರ್ದೇಶಕ ಉಸ್ಮಾನ್ ಹಂಗಳೂರು ಹಾಗು ಇತರರು ಉಪಸ್ಥಿತರಿದ್ದರು.
Next Story






