ಕೋಟ | ಅಂದರ್-ಬಾಹರ್: ಆರು ಮಂದಿ ಬಂಧನ

ಸಾಂದರ್ಭಿಕ ಚಿತ್ರ
ಕೋಟ : ಮೊಳಹಳ್ಳಿ ಗ್ರಾಮದ ಕೋಣಿಹರ ಎಂಬಲ್ಲಿ ಭಾಸ್ಕರ ಶೆಟ್ಟಿ ಎಂಬವರ ಮನೆಯ ಎದುರು ಹಾಡಿಯಲ್ಲಿ ಜೂ.7ರಂದು ಅಂದರ್- ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ಮೊಳಹಳ್ಳಿ ಗ್ರಾಮದ ಚಂದ್ರ ಮೊಗವೀರ(43), ಹುಣ್ಸೆಮಕ್ಕಿಯ ಉಮೇಶ(33), ಕೃಷ್ಣ(27), ರಾಜು(39), ಜಪ್ತಿ ಗ್ರಾಮದ ರಘುರಾಮ ಶೆಟ್ಟಿ(49), ಶಂಕರನಾರಾಯಣ ಬಾಗರಮಕ್ಕಿಯ ಆನಂದ(56) ಬಂಧಿತ ಆರೋಪಿಗಳು. ಇವರಿಂದ ಒಟ್ಟು 7,900 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




