ಕೋಟ | ಇಂಜಿನಿಯರ್‌ಗೆ ಆನ್‌ಲೈನ್ ವಂಚನೆ

ಕೋಟ, ಡಿ.10: ಆನ್‌ಲೈನ್ ಮೂಲಕ ಸಾಲ ಪಡೆದಿದ್ದ ಇಂಜಿನಿಯರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಸ್ತಾನದ ರಂಜನ್ ಶೆಟ್ಟಿಗಾರ್(33) ಎಂಬವರು ಬೆಂಗಳೂರಿನಲ್ಲಿ ಆಟೊ ಮೊಬೈಲ್ ಇಂಜಿನಿಯರ್ ಕೆಲಸ ಮಾಡಿಕೊಂಡಿದ್ದು, ಸುಮಾರು ಒಂದು ತಿಂಗಳ ಹಿಂದೆ ಹಣದ ಅವಶ್ಯ ಇರುವುದರಿಂದ ಮೊಬೈಲ್‌ನಲ್ಲಿ ಆನ್‌ಲೈನ್ ಲೋನ್‌ಗೆ
ಅಪ್ಲೇ ಮಾಡಿದ್ದರು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಸೆಲ್ಫಿ ಫೋಟೊ, ಮೊಬೈಲ್ ಲೋಕೇಶನ್, ಮೊಬೈಲ್ ಕಾಂಟಕ್ಟ್ ಡಿಟೈಲ್ಸ್‌ನ್ನು ಹಾಕಿ 12,000 ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. 6 ದಿನದ ಒಳಗೆ ಸಾಲವಾಗಿ ಪಡೆದ 12,000 ರೂ.ವನ್ನು ವಾಪಸ್ಸು ಪಾವತಿಸಿದ್ದರು. ಬಳಿಕ ಅವರ ಹೆಸರಲ್ಲಿ ಇನ್ನಷ್ಟು ಲೋನ್ ಪಡೆದು, ವಾಟ್ಸ್ ಆ್ಯಪ್ ಮತ್ತು ಟೆಲಿಗ್ರಾಮ್ ಆ್ಯಪ್ ಮೂಲಕ ಅಪರಿಚಿತರು ಕರೆ ಮಾಡಿ ಹಣ ಹಾಕದಿದ್ದರೆ ಮೊಬೈಲ್ ಡಾಟಾವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದರು. ಅದರಂತೆ ರಂಜನ್ ಹಂತಹಂತವಾಗಿ ಆ್ಯಪ್ ಮೂಲಕ 4,37,253 ರೂ.ವನ್ನು ಹಾಕಿರುವುದಾಗಿ ದೂರಲಾಗಿದೆ.





