ಕೋಟ | ಮರದ ಬುಡಕ್ಕೆ ಬೆಂಕಿ: ಆಕ್ರೋಶ

ಕೋಟ, ನ.25: ಇಲ್ಲಿನ ತೆಕ್ಕಟ್ಟೆ ಕನ್ನುಕೆರೆ ರಾಷ್ಟ್ರೀಯ ಹೆದ್ದಾರಿ ಬದಿ ಅರಣ್ಯ ಇಲಾಖೆಯ ಸಂರಕ್ಷಣೆಯಲ್ಲಿ ನೆಟ್ಟ ಮರದ ಬುಡಕ್ಕೆ ಸನಿಹದ ಗಣೇಶ್ ಸೆರಾಮಿಕ್ಸ್ ಮಾಲಕ ಬೆಂಕಿ ಇರಿಸಿ ಮರಕ್ಕೆ ಹಾನಿಗೊಳಿಸಿದ ಘಟನೆ ಸೋಮವಾರ ನಡೆದಿದೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಕುಂದಾಪುರ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಮಾಲಕನನ್ನು ತರಾಟೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡರು.
ಉಡುಪಿ ಜಿಲ್ಲೆಯಲ್ಲಿ ಗಿಡಮರಗಳನ್ನು ಸಂರಕ್ಷಿಸಿ ಪೋಷಿಸುತ್ತಿರುವ ಕೋಟದ ಪಂಚವರ್ಣ ಸಂಘಟನೆ ಮರಗಿಡಗಳಿಗೆ ಹಾನಿಯುಂಟು ಮಾಡುವ ಹೀನ ಮನಸ್ಥಿತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
Next Story





