ಕೃಷಿ ಬದುಕು ಉಳಿದರೆ ಧರ್ಮ, ಸಂಸ್ಕೃತಿ: ಈಶ್ವರ್ ಚಿಟ್ಪಾಡಿ

ಉಡುಪಿ: ಕಾಲ ಬದಲಾವಣೆಯ ಹೊಡೆತಕ್ಕೆ ಕೃಷಿ ಬದುಕು ಕೂಡಾ ಹೊರತಾಗಿಲ್ಲ. ಹಾಗಿದ್ದೂ ನಮ್ಮೆಲ್ಲರ ಜೀವನ ಕೃಷಿಯೊಂದಿಗೆ ಜೋಡಿಸಿ ಕೊಂಡಿರುವುದರಿಂದ, ಕೃಷಿ ಬದುಕು ಉಳಿದರೆ ಮಾತ್ರ ನಮ್ಮ ಧರ್ಮ ಸಂಸ್ಕೃತಿಗಳು ಉಳಿಯಲಿವೆ. ಕೃಷಿ ಬದುಕು ನಶಿಸಿದರೆ ಧರ್ಮ ಸಂಸ್ಕೃತಿಗಳು ಕೂಡಾ ಅವನತಿಯ ಹಂತ ತಲುಪಲಿದೆ ಎಂದು ಸಿರಿ ತುಳು ಚಾವಡಿಯ ಗುರಿಕಾರ ಈಶ್ವರ್ ಚಿಟ್ಪಾಡಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಲಾದ ಕೃಷಿ ಚಿಂತನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮವನ್ನು ಶ್ರೀಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದ ಟ್ರಸ್ಟಿ ಕೆ.ದಿವಾಕರ ಶೆಟ್ಟಿ ಕೊಡವೂರು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಪಾಂಡುರಂಗ ನಾಯಕ್ ಹಿರಿಯಡ್ಕ, ಸುರೇಶ್ ನಾಯಕ್ ಅಲೆವೂರು, ಲಕ್ಷ್ಮೀ ನಾರಾಯಣ ಉಪಾಧ್ಯಾಯ, ರಮೇಶ್ ಪೂಜಾರಿ ಹುಣ್ಸೆಮಕ್ಕಿ, ಭಾರತಿ ಶೆಟ್ಟಿ ಅಂಜಾರು, ರೊನಾಲ್ಡ್ ಡಿಸೋಜ ಆನಗಳ್ಳಿ, ರವೀಂದ್ರ ಪೂಜಾರಿ ಶೀಂಬ್ರ, ಸುಬ್ರಹ್ಮಣ್ಯ ಶ್ರೀಯಾನ್, ಜಯಲಕ್ಷ್ಮೀ ಪಿತ್ರೋಡಿ, ವಿಠಲ ನಾಯಕ್ ಕೊಡಂಗಳ, ಜೋಸೆಫ್ ಕುಂದರ್, ಕಾಮೆಲ್ ಸಿಕ್ವೇರಾ ಮಣಿಪುರ ಮೊದಲಾದವರು ಉಪಸ್ಥಿತರಿದ್ದರು.
ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕುದಿ ಶ್ರಿನಿವಾಸ ಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.







