Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಉಡುಪಿ
  4. ಕುಂದಾಪುರ | ಬೃಹತ್ ಶಿಲಾಯುಗದ 2...

ಕುಂದಾಪುರ | ಬೃಹತ್ ಶಿಲಾಯುಗದ 2 ನಿಲ್ಸ್‌ಕಲ್‌ಗಳು ಪತ್ತೆ

ವಾರ್ತಾಭಾರತಿವಾರ್ತಾಭಾರತಿ22 Nov 2025 7:29 PM IST
share
ಕುಂದಾಪುರ | ಬೃಹತ್ ಶಿಲಾಯುಗದ 2 ನಿಲ್ಸ್‌ಕಲ್‌ಗಳು ಪತ್ತೆ

ಉಡುಪಿ, ನ.22: ಉಡುಪಿಯ ರಾಷ್ಟ್ರೀಯ ಸಂಘಟನೆ ‘ಆದಿಮ ಕಲಾ ಟ್ರಸ್ಟ್’ ಇತ್ತೀಚಿಗೆ ನಡೆಸಿದ ಪುರಾತತ್ತ್ವ ಅನ್ವೇಷಣೆಯಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಿಲ್ಕೋಡು ಮತ್ತು ಮಾವಿನಕೆರೆಯಲ್ಲಿ ಬೃಹತ್ ಶಿಲಾಯುಗ ಕಾಲದ ಎರಡು ನಿಲ್ಸ್‌ಕಲ್‌ಗಳು ಪತ್ತೆಯಾಗಿವೆ ಎಂದು ಪುರಾತತ್ತ್ವ ಸಂಶೋಧಕ ಮತ್ತು ಆದಿಮ ಕಲಾ ಟ್ರಸ್ಟ್ ನ ಸ್ಥಾಪಕ ಸಂಚಾಲಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.

ಕುಂದಾಪುರ ತಾಲೂಕಿನ ನೇರಳೆಕಟ್ಟೆಯಿಂದ ಆಜ್ರಿಗೆ ಹೋಗುವ ರಾಜ್ಯ ಹೆದ್ದಾರಿಯ ಎಡಬದಿಯ ದೈವದ ಹಾಡಿಯಲ್ಲಿ ಹಿಲ್ಕೋಡಿನ ನಿಲ್ಸ್‌ಕಲ್‌ ಇದೆ. ಸ್ಥಳೀಯವಾಗಿ ಜನರು ಅದನ್ನು ನೀಚ ದೈವ/ಬೊಬ್ಬರ್ಯನ ಕಲ್ಲು ಎಂದು ಕರೆಯುತ್ತಾರೆ. ಮತ್ತೊಂದು ನಿಲ್ಸ್‌ಕಲ್‌ ಇದೇ ತಾಲೂಕಿನ ಕೆಂಚನೂರು ಗ್ರಾಮದ ಮಾವಿನಕೆರೆ ಹಾಡಿಯಲ್ಲಿ ರಸ್ತೆ ಬದಿಯಲ್ಲಿಯೇ ಕಂಡುಬಂದಿದೆ. ಇತ್ತೀಚಿಗೆ ಸ್ಥಳೀಯರು ಈ ನಿಲುವುಗಲ್ಲಿನ ಅರ್ಧಭಾಗಕ್ಕೆ ಒಂದು ಕಟ್ಟೆಯನ್ನು ಕಟ್ಟಿ ಅದನ್ನು ರಕ್ತೇಶ್ವರಿ ಎಂದು ಆರಾಧಿಸುತ್ತಿದ್ದಾರೆ ಎಂದು ಪ್ರೊ.ಮುರುಗೇಶಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಾವಿನಕೆರೆಯ ನಿಲ್ಸ್‌ಕಲ್‌ 112 ಸೆ.ಮೀ. ಎತ್ತರವಿದ್ದು, ಪಶ್ಚಿಮೋತ್ತರದ ಕಡೆ ಸ್ವಲ್ಪ ವಾಲಿದಂತೆ ಮುಖವನ್ನು ನಿರ್ದೇಶಿಸಲಾಗಿದೆ. ಹಿಲ್ಕೋಡಿನ ನಿಲ್ಸ್‌ಕಲ್‌ ಸುಮಾರು 135 ಸೆ.ಮೀ. ಎತ್ತರವಿದೆ. ಹಿಲ್ಕೋಡು ನಿಲ್ಸ್‌ಕಲ್‌ ಕೆಳಗೆ ಪರೀಕ್ಷಾರ್ಥವಾಗಿ ನಡೆಸಿದ ಅಗೆತದಲ್ಲಿ ಕೆಂಪು ಮತ್ತು ಕೆನೆಬಣ್ಣದ ಮಡಕೆ ಅವಶೇಷದ ತುಣುಕುಗಳು ಕಂಡುಬಂದಿವೆ ಎಂದು ಅವರು ಹೇಳಿದ್ದಾರೆ.

ಬೃಹತ್ ಶಿಲಾಯುಗ ಸಂಸ್ಕೃತಿಯ ಜನರು, ಅಂತ್ಯ ಸಂಸ್ಕಾರದ ನಂತರ ಸಮಾಧಿಗಳ ಮೇಲೆ ಅಥವಾ ಸಮಾಧಿಯ ಸಮೀಪದಲ್ಲಿಯೋ ನೆನಪಿನ ಸ್ಮಾರಕಗಳಾಗಿ ಬೃಹತ್ ನಿಲುವುಗಲ್ಲುಗಳನ್ನು ನಿಲ್ಲಿಸುತ್ತಿದ್ದರು. ಸಾಮಾನ್ಯವಾಗಿ ನಿಲುವುಗಲ್ಲುಗಳು 3 ಅಡಿ ಎತ್ತರದಿಂದ 16, 17 ಅಡಿ ಎತ್ತರದವರೆಗೆ ಇರುವುದು ಕಂಡು ಬರುತ್ತವೆ. ದಕ್ಷಿಣ ಭಾರತದಾದ್ಯಂತ ಕಂಡುಬರುವ ನಿಲುವುಗಲ್ಲುಗಳನ್ನು ರಕ್ಕಸಗಲ್ಲು, ನಿಲ್ಸ್‌ಕಲ್‌, ನಿಂತಿಕಲ್ಲು, ಗರ್ಭಿಣಿಯರ ಕಲ್ಲು, ಬಸುರಿಕಲ್ಲು, ಆನೆಕಲ್ಲು ಮುಂತಾದ ಹೆಸರುಗಳಿಂದ ಕರೆಯಲಾಗುತ್ತದೆ.

ಚಾರಿತ್ರಿಕ ಮಹತ್ವ :

ಮಾವಿನಕೆರೆ ಮತ್ತು ಹಿಲ್ಕೋಡಿನ ನಿಲ್ಸ್‌ಕಲ್‌ಗಳು ಬೃಹತ್ ಶಿಲಾಯುಗದ ಅಂತ್ಯಕಾಲದ ಅವಶೇಷಗಳಾಗಿವೆ. ಹಿಲ್ಕೋಡಿನ ನಿಲ್ಸ್‌ಕಲ್ಲಿನ ಕೆಳಭಾಗದಲ್ಲಿ ದೊರೆತ ಕೆಂಪು ಮತ್ತು ಕೆನೆಬಣ್ಣದ ಮಡಕೆಯ ಅವಶೇಷಗಳು ಈ ಅಭಿಪ್ರಾಯವನ್ನು ಸಮರ್ಥಿಸುತ್ತವೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಿಲ್ಸ್‌ಕಲ್‌ ಮತ್ತು ಹೆರಗಲ್ ಸಮೂಹದ ನಿಲುವುಗಲ್ಲುಗಳು ಕಾಲಮಾನದ ದೃಷ್ಟಿಯಿಂದ ಬಹಳ ಪ್ರಾಚೀನವಾಗಿದ್ದು, ಸುಮಾರು ಕ್ರಿ.ಪೂ. 800ರ ಕಾಲದವುಗಳೆಂದು ತರ್ಕಿಸಲಾಗಿದೆ.

ಆದರೆ, ಕುಂದಾಪುರದಲ್ಲಿ ಕಂಡುಬಂದಿರುವ ನಿಲ್ಸ್‌ಕಲ್‌ಗಳು ಕ್ರಿ.ಪೂ. 300 ರಿಂದ ಕ್ರಿ.ಶ.1 ಅಥವಾ 2ನೇ ಶತಮಾನಕ್ಕೆ ಸೇರಿದವುಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ತುಳುನಾಡಿನ ಸಾಂಸ್ಕೃತಿಕ ಬದುಕಿನ ಮೇಲೆ ಅಗಾಧ ಪರಿಣಾಮವನ್ನು ಉಂಟುಮಾಡಿರುವ ಬೃಹತ್ ಶಿಲಾಯುಗದ ಅವಶೇಷಗಳನ್ನು ಸಂರಕ್ಷಿಸುವುದು ಎಲ್ಲರ ಹೊಣೆಯಾಗಿದೆ ಎಂದು ಪ್ರೊ.ಮುರುಗೇಶಿ ಹೇಳಿದ್ದಾರೆ.

ಈ ಸಂಶೋಧನೆಯಲ್ಲಿ ತಮಗೆ ಸಹಾಯ ಮಾಡಿದ ವಿಶ್ವನಾಥ್ ಗುಲ್ವಾಡಿ, ಸುಧಾಕರ್ ಶೆಟ್ಟಿ, ಕೃಷಿ ಅಧಿಕಾರಿ ಸಿ.ನಾಗರಾಜ್ ಶೆಟ್ಟಿ, ಮಂಜು ಪೂಜಾರಿ ಹಿಲ್ಕೋಡು, ಆದಿಮ ಕಲಾ ಸಂಶೋಧನಾ ತಂಡದ ಸದಸ್ಯರಾದ ಮುರುಳೀಧರ ಹೆಗಡೆ ಇಡೂರು-ಕುಂಜ್ಞಾಡಿ, ಶ್ರೇಯಸ್ ಬಂಟಕಲ್, ಗೌತಮ್ ಬೆಳ್ಮಣ್ ಇವರಿಗೆ ತಾವು ಅಭಾರಿಯಾಗಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X