ಕುಂದಾಪುರ: ಹೆಜ್ಜೇನು ದಾಳಿಯಿಂದ ವ್ಯಕ್ತಿ ಮೃತ್ಯು

ಕುಂದಾಪುರ, ಡಿ.21: ಹೆಜ್ಜೇನು ದಾಳಿಯಿಂದ ಗಂಭೀರ ಗಾಯಗೊಂಡಿದ್ದ ವೃದ್ಧರೊಬ್ಬರು, ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಬಸ್ರೂರಲ್ಲಿ ಬುಧವಾರ ನಡೆದಿದೆ.
ಬಸ್ರೂರಿನ ಬಸ್ ನಿಲ್ದಾಣ ಬಳಿಯ ನಿವಾಸಿ ಜಗಜೀವನ್ (76) ಮೃತಪಟ್ಟವರು.
ಮಂಗಳವಾರ ಸಂಜೆ ಇವರು ಮನೆಯಿಂದ ಬಸ್ರೂರಿನ ಬಸ್ ನಿಲ್ದಾಣ ಬಳಿ ಬರುವಾಗ ಹೆಜ್ಜೇನು ಹಿಂಡು ದಾಳಿ ನಡೆಸಿವೆ. ಬಸ್ ನಿಲ್ದಾಣ ಬಳಿಯಿದ್ದ ಹೆಜ್ಜೇನು ಹಿಂಡಿಗೆ ಯಾವುದೋ ಹಕ್ಕಿ ಬಡಿದ ಕಾರಣ ಹೆಜ್ಜೇನುಗಳು ಅದೇ ದಾರಿಯಲ್ಲಿ ಬರುತ್ತಿದ್ದ ಜಗಜೀವನ್ ಅವರ ಮೇಲೆ ದಾಳಿ ನಡೆಸಿವೆ. ಏಕಕಾಲದಲ್ಲಿ ನೂರಾರು ಹೆಜ್ಜೇನುಗಳು ದಾಳಿ ನಡೆಸಿದ್ದರಿಂದ ಮುಖ, ದೇಹ, ಕೈ-ಕಾಲುಗಳೆಲ್ಲ ಊದಿಕೊಂಡು, ಗಂಭೀರ ಗಾಯಗೊಂಡಿದ್ದರೆನ್ನಲಾಗಿದೆ.
ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ಬೆಳಗ್ಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
Next Story





