Kundapur | ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಮಕ್ಕಳಿಗಾಗಿ ‘ತೆರೆದ ಮನೆ’ ಕಾರ್ಯಕ್ರಮ

ಕುಂದಾಪುರ : ಶಂಕರನಾರಾಯಣದ ಜಿ.ಎಸ್.ಆಚಾರ್ಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ಬೇಸಿಗೆ ಶಿಬಿರದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ’ತೆರೆದ ಮನೆ’ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಠಾಣೆಯ ನಿಸ್ತಂತು ಕುರಿತು ಸೂಕ್ತ ತಿಳುವಳಿಕೆ ಹಾಗೂ ರಿವಾಲ್ವರ್ ಮತ್ತು ಬಂದೂಕುಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಮಕ್ಕಳ ಸಹಾಯವಾಣಿ 1098 ಬಗ್ಗೆ ಹಾಗೂ 112 ಅದರ ಉಪಯೋಗದ ಬಗ್ಗೆ, ಬಾಲ ಅಪರಾಧ ಫೋಕ್ಸೋ ಕಾಯ್ದೆ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಲಾಯಿತು. ಠಾಣೆಯ ಬಂಧಿಖಾನೆಯನ್ನು ಪೊಲೀಸ್ ಉಪನಿರೀಕ್ಷಕರ ಕೊಠಡಿ ಠಾಣಾ ಬರಹಗಾರರ ಕೊಠಡಿ ಪರಿಚಯಿಸ ಲಾಯಿತು.
ಕುಂದಾಪುರ ಗ್ರಾಮಾಂತರ ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಶಂಕರನಾರಾಯಣ ಪೊಲೀಸ್ ಠಾಣಾ ಕಾನೂನು ಮತ್ತು ಸುವ್ಯವಸ್ಥೆ ಪಿಎಸ್‌ಐ ಐ.ಆರ್.ಗಡ್ಡೇಕರ್, ತನಿಖಾ ವಿಭಾಗದ ಪಿಎಸ್‌ಐ ಅಕ್ಷಯಕುಮಾರಿ ಮತ್ತು ಎಎಸ್‌ಐ, ಸಿಬ್ಬಂದಿ ಹಾಜರಿದ್ದರು.
Next Story




