ಕುಂದಾಪುರ | ಸಿಎ ಪರೀಕ್ಷೆಯಲ್ಲಿ ಉತ್ತೀರ್ಣ: ಅಬ್ದುಲ್ ಝಾಹಿದ್‌ಗೆ ಸನ್ಮಾನ

ಕುಂದಾಪುರ, ನ.23: ಬೆಳ್ವೆ ಇಸ್ಲಾಮಿಕ್ ಯೂತ್ ಫೆಡರೇಶನ್ ವತಿಯಿಂದ 2025-26ನೇ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಹೆಬ್ರಿ ತಾಲೂಕು ಅಲ್ಬಾಡಿ ಗ್ರಾಮದ ಶೇಖ್ ಅಬ್ದುಲ್ ಝಾಹಿದ್ ಅವರನ್ನು ಇತ್ತೀಚೆಗೆ ಬೆಳ್ವೆ ಜುಮ್ಮಾ ಮಸೀದಿಯಲ್ಲಿ ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಇಸ್ಲಾಮಿಕ್ ಯೂತ್ ಫೆಡರೇಶನ್ ಅಧ್ಯಕ್ಷ ಮುಹಮ್ಮದ್ ನಝೀರ್ ಅಲ್ಬಾಡಿ ವಹಿಸಿದ್ದರು. ಬೆಳ್ವೆ ಜುಮ್ಮಾ ಮಸೀದಿ ಅಧ್ಯಕ್ಷ ಅಹಮದ್ ಬ್ಯಾರಿ, ಹಿದಾಯತುಲ್ ಉಲೂಮ್ ಮದ್ರಸ ಕಮಿಟಿ ಅಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಜುಮ್ಮಾ ಮಸೀದಿ ಬೆಳ್ವೆ ಕಮಿಟಿ ಉಪಾಧ್ಯಕ್ಷ ಮೊಹಮ್ಮದ್ ಫಾರೂಕ್ ಬೆಳ್ವೆ, ಕಾರ್ಯದರ್ಶಿ ಶಕೀಲ್ ಅಹಮದ್ ಬೆಳ್ವೆ, ಕೋಶಾಧಿಕಾರಿ ಮುಹಮ್ಮದ್ ಅನ್ಸಾರ್, ಮಾಜಿ ಅಧ್ಯಕ್ಷ ಶಬ್ಬೀರ್ ಸಾಹೇಬ್, ಹಿರಿಯರಾದ ಗೌಸ್ ಸಾಹೇಬ್ ಬೆಳ್ವೆ ಉಪಸ್ಥಿತರಿದ್ದರು.
ಜುಮ್ಮಾ ಮಸೀದಿ ಬೆಳ್ವೆ ಖತೀಬ್ ಮೌಲಾನಾ ಮುಹಮ್ಮದ್ ರಫೀಕ್ ಬೆಳ್ವೆ ದುವಾ ನೆರವೇರಿಸಿ ಶುಭ ಹಾರೈಸಿದರು. ಮುಹಮ್ಮದ್ ರಯಾನ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Next Story





