ಕುಂದಾಪುರದ ಬರ್ನಾಡ್ ಡಿಕೋಸ್ತಾಗೆ ಗೌರವ ಪುರಸ್ಕಾರ

ಕುಂದಾಪುರ, ಡಿ.17: ಕೊಂಕಣಿಯ ಸಾಹಿತಿ ವಾಲೇರಿಯನ್ ಕ್ವಾಡರ್ಸ್ ಇವರ ಆಶಾವಾದಿ ಪ್ರಕಾಶನದ ಬೆಳ್ಳಿ ಹಬ್ಬ ಮತ್ತು ಪಯ್ಣಾರಿ ಸುದ್ದಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮದ ವೇಳೆ, ಕೊಂಕಣಿಯಲ್ಲಿ ಸಾಹಿತ್ಯ, ಸಾಮಾಜಿಕ ಸೇವೆ, ಇನ್ನಿತರ ಕ್ಷೇತ್ರದಲ್ಲಿ ವಿಶೇಷ ಸೇವೆ ನೀಡಿದವರ ಜೊತೆ ಕುಂದಾಪುರದ ಸಾಹಿತಿ, ಕವಿ, ನಾಟಕಾರ, ಹಾಗೂ ಮಾಧ್ಯಮದ ಸೇವೆಯನ್ನು ಪರಿಗಣಿಸಿ ಬರ್ನಾಡ್ ಡಿಕೋಸ್ತಾ ಅವರನ್ನು ಡಿ.14ರಂದು ಮಂಗಳೂರಿನ ಹಂಪನ್ ಕಟ್ಟೆಯ ಎಂ.ಸಿ.ಸಿ. ಬ್ಯಾಂಕಿನ ಸಭಾಭವನದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಫಾ.ರುಷೇಶ್ ಮಾಡ್ತಾ, ಡೊ.ಜಯವಂತ ನಾಯ್ಕ್ ಶಾಲಿನಿ ವಾಲೆನ್ಸಿಯಾ, ಡೇವಿಡ್ ಡಿಸೋಜ್ ಅಜೆಕಾರ್, ಶೈಲೇಂದ್ರ ಮೆಹ್ತಾ, ಚಾರ್ಲ್ ಲೋಬೊ, ಅ್ಯಂಡ್ರೂ ಎಲ್. ಡಿಕುನ್ಹಾ, ಎಚ್ಚೆಮ್ ಪೆರ್ನಾಲ್ ಫಾ ಚೇತನ್ ಲೋಬೊ, ಮೆಲ್ಟಿನ್ ರೊಡ್ರಿಗಸ್, ಫಾ.ಆಲ್ವಿನ್ ಸೆರಾವೊ, ಡೊ.ಎಡ್ಬರ್ಡ್ ಎಲ್ ನಜ್ರೆತ್, ವಿನ್ಸಿ ಕ್ಹಾಡ್ರಸ್, ಎಚ್. ಆರ್.ಆಳ್ವ, ಎಮ್. ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಜೋನ್ ಪೆರ್ಮನ್ನೂರ್, ವಾಯ್ದೆಟ್ ಜೆ. ಪಿರೇರಾ, ಸಾವ್ರಾಟ್ ಭೊಜೆ, ಕೊನ್ಸೆಪ್ಪಾ ಫೆರ್ನಾಂಡಿಸ್ ಮೊದಲಾದವರು ಉಪಸ್ಥಿತರಿದ್ದರು.





