KUNDAPURA | ಕಾರು ಪಲ್ಟಿ: ಮಗು ಮೃತ್ಯು, ದಂಪತಿಗೆ ಗಾಯ

ಪ್ರಾತಿನಿಧಿಕ ಚಿತ್ರ (Pic: Meta AI)
ಶಂಕರನಾರಾಯಣ, ಫೆ.22: ಕಾರೊಂದು ರಸ್ತೆ ಬದಿಯ ಚರಂಡಿಗೆ ಬಿದ್ದ ಪರಿಣಾಮ ಮಗು ಮೃತಪಟ್ಟು, ದಂಪತಿ ಗಾಯಗೊಂಡಿರುವ ಘಟನೆ ಅಂಪಾರು ಗ್ರಾಮದ ಬಾಲ್ಕಟ್ ಎಂಬಲ್ಲಿ ಫೆ.21ರಂದು ಸಂಜೆ ವೇಳೆ ನಡೆದಿರುವುದು ವರದಿಯಾಗಿದೆ.
ರಾಘವೇಂದ್ರ ಆಚಾರ್ಯ ಹಾಗೂ ತುಳಸಿ ದಂಪತಿಯ ಎರಡೂವರೆ ವರ್ಷದ ಮಗು ಅಯಾನ್ಶ ಮೃತಪಟ್ಟಿದೆ. ಅಪಘಾತದಲ್ಲಿ ದಂಪತಿ ತೀವ್ರವಾಗಿ ಗಾಯಗೊಂಡಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಸಿದ್ದಾಪುರ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಚರಂಡಿಗೆ ಬಡಿದು ಉರುಳಿ ಬಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಮಗು ದಾರಿಮಧ್ಯೆ ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story




