ಕುಂದಾಪುರ| ಗ್ರಾಪಂ ಸದಸ್ಯನ ವಿರುದ್ಧ ದಲಿತ ದೌರ್ಜನ್ಯ ಆರೋಪ; ಪ್ರಕರಣ ದಾಖಲು

ಕುಂದಾಪುರ, ಜ.27: ದಲಿತ ದೌರ್ಜನ್ಯ ಎಸಗಿರುವ ಆರೋಪದಲ್ಲಿ ಕಂದಾವರ ಗ್ರಾಮ ಪಂಚಾಯತ್ ಸದಸ್ಯ ರಾಮಚಂದ್ರ ಶೇರೆಗಾರ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಶಿಷ್ಠ ಪಂಗಡಕ್ಕೆ ಸೇರಿದ ಕಂದಾವರ ಗ್ರಾಮದ ಉಳ್ಳೂರು ಜನತಾ ಕಾಲೋನಿಯ ಚಂದ್ರಶೇಖರ ಎಂಬವರ ಅಜ್ಜಿ ಮಿಣುಕು ಎಂಬವರು ದರ್ಕಾಸ್ ಸ್ಥಳದಲ್ಲಿ ವಾಸವಾಗಿದ್ದು, ಜ.26ರಂದು ರಾಮಚಂದ್ರ ಶೇರೆಗಾರ, ಚಂದ್ರಶೇಖರ್ ಅವರ ಒಪ್ಪಿಗೆ ಇಲ್ಲದೆ ಅವರ ಜಾಗದಲ್ಲಿ ಬಲತ್ಕಾರವಾಗಿ ವಿದ್ಯುತ್ ಕಂಬವನ್ನು ಅಳವಡಿಸುವ ಪ್ರಯತ್ನ ಪಟ್ಟಿದ್ದರು. ಅದನ್ನು ಚಂದ್ರಶೇಖರ್ ವಿರೋಧಿಸಿದಾಗ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ರಾಮಚಂದ್ರ ಶೇರೆಗಾರ ನಡೆದು ಕೊಂಡ ರೀತಿಯು ದಲಿತ ದೌರ್ಜನ್ಯ ಕಾಯಿದೆಗೆ ಒಳಪಟ್ಟಿರುವುದರಿಂದ ಅವರ ವಿರುದ್ಧ ದಲಿತ ದೌರ್ಜನ್ಯ ಪ್ರಕರಣವನ್ನು ದಾಖಲಾಗಿದೆ.
Next Story





