ಕುಂದಾಪುರ | ಮನೆಯ ಕಾಪಾಟಿನಲ್ಲಿದ್ದ 18ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು

ಕುಂದಾಪುರ, ಡಿ.7: ಶಿಕ್ಷಕಿಯೊಬ್ಬರ ಮನೆಯ ಕಾಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳು ಕಳವಾಗಿರುವ ಬಗ್ಗೆ ವರದಿಯಾಗಿದೆ.
ಕೋಟೇಶ್ವರ ಆಟಕೆರೆ ಬಟ್ಟೆ ಅಂಗಡಿ ಎದುರಿನ ನಿವಾಸಿ, ಬಿದ್ಕಲ್ ಕಟ್ಟೆಯ ಕೆಪಿಎಸ್ ಪ್ರೌಢಶಾಲಾ ವಿಭಾಗದ ಶಿಕ್ಷಕಿ ಪೂಜಾ ಕಿಣಿ ಎಂಬವರು ಮನೆಯ ಗೊದ್ರೇಜ್ ನಲ್ಲಿ ಚಿನ್ನಾಭರಣಗಳನ್ನು ಇರಿಸಿ ಬೀಗ ಹಾಕಿ ಬೀಗವನ್ನು ಅಲ್ಲಿಯೇ ಇಟ್ಟು ಹೋಗಿದ್ದರು. 2023ರ ಜ.9ರಂದು ಅವರು ಗೃಹಪ್ರವೇಶ ಕಾರ್ಯಕ್ರಮಕ್ಕೆ ಹೋಗಲು ಗೊದ್ರೇಜ್ ನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ನೋಡುವಾಗ ಕೆಲವು ಚಿನ್ನಾಭರಣಗಳು ಇಲ್ಲದಿರುವುದು ಗಮನಕ್ಕೆ ಬಂತು.
ಇವುಗಳನ್ನು ಲಾಕರ್ ನಲ್ಲಿ ಇಟ್ಟಿರಬಹುದೆಂದು ಭಾವಿಸಿದ ಅವರು, 2025ರ ಜೂ.26ರಂದು ಕಾರ್ಯಕ್ರಮಕ್ಕೆ ಹೋಗಲು ಕಾಪಾಟಿನ ಬೀಗವನ್ನು ತೆರೆದು ನೋಡಿದಾಗ ಅದರಲ್ಲಿ ಇಟ್ಟಿದ್ದ ಚಿನ್ನಾಭರಣಗಳ ಪೈಕಿ ಒಟ್ಟು ಸುಮಾರು 23 ಪವನ್ ಚಿನ್ನಾಭರಣಗಳು ಕಳವು ಆಗಿರುವುದು ಕಂಡುಬಂದಿದೆ. ಇವುಗಳ ಒಟ್ಟು ಮೌಲ್ಯ 18 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





