Kundapura | ತಾರ್ಕಿಮಕ್ಕಿಯ ಯುವಕ ನಾಪತ್ತೆ

ಕುಂದಾಪುರ: ಹೊಸಂಗಡಿ ತಾರ್ಕಿಮಕ್ಕಿ ಎಂಬಲ್ಲಿ ಯುವಕನೋರ್ವ ಅ.2ರಿಂದ ನಾಪತ್ತೆಯಾಗಿರುವ ಬಗ್ಗೆ ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಸಂಗಡಿ ತಾರ್ಕಿಮಕ್ಕಿ ನಿವಾಸಿ ಕವೀನಾ ನಾಯ್ಕ್ (26) ನಾಪತ್ತೆಯಾದವರು. ಕವೀನಾ ನಾಯ್ಕ ಹಾಲ್ಕಲ್ ಬಳಿ ಸ್ವಂತ ಟಿಪ್ಪರ್ ಇಟ್ಟುಕೊಂಡು 3-4 ವಷರ್ಗಳಿಂದ ವ್ಯವಹಾರ ಮಾಡಿಕೊಂಡಿದ್ದರು. ಅ.2ರಂದು ಸಂಜೆ 6.30ರ ಸುಮಾರಿಗೆ ಸ್ನೇಹಿತನ ಬಳಿ ಮನೆಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿರುವ ಕವೀನಾ ವಾಪಸ್ ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ. ಅವರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ. ಈವರೆಗೆ ಕವೀನಾ ಅವರ ಯಾವುದೇ ಸುಳಿವು ಸಿಕ್ಕಿಲ್ಲ ಕವೀನಾರ ಸಹೋದರ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಮಾಸೆಬೈಲು ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story




