ಲೇ-ಕೌನ್ಸೆಲರ್ ತರಬೇತಿ ಕಾರ್ಯಾಗಾರ

ಉಡುಪಿ, ಸೆ.20: ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ವೃತ್ತಿಪರರ ಸಹಾಯ ಪಡೆಯಲು ಇರುವ ಕಳಂಕ ಮತ್ತು ತಪ್ಪು ನಂಬಿಕೆಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಮತ್ತು ಒನ್ ಗುಡ್ ಸ್ಟೆಪ್ ಇವರ ಜಂಟಿ ಆಶ್ರಯದಲ್ಲಿ 12 ವಾರಗಳ ಕಾಲ ಲೇ-ಕೌನ್ಸೆಲರ್ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿ ರವಿವಾರ ನಡೆಯುವ ಈ ಕಾರ್ಯಾಗಾರವನ್ನು ಮಾನಸಿಕ ಆರೋಗ್ಯ ತಜ್ಞ ಡಾ.ಸಿ.ಆರ್.ಚಂದ್ರಶೇಖರ್ ಅ.2.ರಂದು ಬೆಳಿಗ್ಗೆ 10ಗಂಟೆಗೆ ಬಾಳಿಗಾ ಆಸ್ಪತ್ರೆಯಲ್ಲಿ ಉದ್ಘಾಟಿಸಲಿರುವರು. ಲೇ-ಕೌನ್ಸೆಲರ್ ಭಾವನಾತ್ಮಕ ಬೆಂಬಲವನ್ನು ನೀಡಲು ಮತ್ತು ಅಗತ್ಯವಿರುವರಿಗೆ ಸಹಾನುಭೂತಿಯನ್ನು ತೋರಿಸಲು ತರಬೇತಿ ಪಡೆದ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸು ತ್ತಾರೆ. ಜನರ ಸಮಸ್ಯೆಯನ್ನು ಸಕ್ರಿಯವಾಗಿ ಆಲಿಸುವಿಕೆಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಇವರು ಅಗತ್ಯವಿದ್ದರೆ ಮಾನಸಿಕ ಆರೋಗ್ಯ ತಜ್ಞರನ್ನು ಮತ್ತು ವೃತ್ತಿಪರ ಸಹಾಯ ಪಡೆಯಲು ವ್ಯಕ್ತಿಗಳಿಗೆ ಮಾರ್ಗದರ್ಶನ ನೀಡುತ್ತಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಪಿ.ವಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದರಲ್ಲಿ ಸಂವಹನ ಕೌಶಲ್ಯ, ಆಲಿಸುವ ಕೌಶಲ್ಯ, ಪೂರ್ವಗ್ರಹಪೀಡಿತ ವಲ್ಲದ ಸಂವಹನ, ಬಿಕ್ಕಟಿನ ಮಧ್ಯಸ್ಥಿಕೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಅವುಗಳ ಲಕ್ಷಣ, ಮಾನಸಿಕ ಆರೋಗ್ಯ ಪರಿಸ್ಥಿತಿಗಳು, ಒತ್ತಡ ನಿರ್ವಹಣೆ, ಕುರಿತು ತರಬೇತಿ ನೀಡಲಾಗುವುದು. ತರಬೇತಿಯನ್ನು ಪಡೆಯಲು ಮಾನಸಿಕ ಆರೋಗ್ಯದ ಬಗ್ಗೆ ಪೂರ್ವ ಜ್ಞಾನ ಅಥವಾ ತರಬೇತಿ ಆಗತ್ಯವಿಲ್ಲ. ಭಾಷ ಜ್ಞಾನ ಹಾಗೂ ಸಂಕಷ್ಟ ಮತ್ತು ಒತ್ತಡದಲ್ಲಿ ಇರುವರಿಗೆ ಸಹಾಯ ಮಾಡುವ ಮನಸ್ಥಿತಿ ಇರಬೇಕು.
ಆಸಕ್ತರು ಸೆ.25ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ಆಡಳಿತಾಧಿಕಾರಿ ಸೌಜನ್ಯ ಕೆ.ಶೆಟ್ಟಿ(ಮೊ-9538886291) ಮತ್ತು ಒನ್ ಗುಡ್ ಸ್ಟೆಪ್‌ನ ಅಮಿತಾ ಪೈ(ಮೊ-9986411788) ಅವರನ್ನು ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.