ಕೆಮ್ಮಣ್ಣು ಪರಿಸರದಲ್ಲಿ ಚಿರತೆ: ಸ್ಥಳೀಯರಲ್ಲಿ ಆತಂಕ

ಉಡುಪಿ, ಜ.31: ಕೆಮ್ಮಣ್ಣು, ತೆಂಕನಿಡಿಯೂರು, ಬಡಾನಿಡಿಯೂರು ಹಾಗೂ ಕಲ್ಯಾಣಪುರ ಗ್ರಾಮಗಳ ವ್ಯಾಪ್ತಿಯಲ್ಲಿ ಚಿರತೆಯೊಂದು ಕಾಣಿಸಿ ಕೊಂಡಿದ್ದು, ಇದರಿಂದ ಸ್ಥಳೀಯರು ಭಯ ಭೀತರಾಗಿರುವ ಬಗ್ಗೆ ವರದಿಯಾಗಿದೆ.
ಒಂದು ವಾರದ ಹಿಂದೆ ಅಂಬಾಗಿಲಿನ ಬಳಿ ಕಾಣಿಸಿಕೊಂಡ ಚಿರತೆ, ಬಳಿಕ ತೆಂಕನಿಡಿಯೂರು ಪ್ರದೇಶದಲ್ಲಿ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಬಡಾನಿಡಿಯೂರು ಗ್ರಾಮದ ಕದಿಕೆ ಎಂಬಲ್ಲಿಯೂ ಚಿರತೆ ಕಾಣ ಸಿಕ್ಕಿದೆ ಎಂದು ತಿಳಿದುಬಂದಿದೆ. ಇದರಿಂದ ಈ ಪರಿಸರದ ಜನ ಭಯ ಭೀತರಾಗಿ ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎರಡು ದಿನಗಳ ಹಿಂದೆ ಕೆಮ್ಮಣ್ಣು ಸಮೀಪದ ಹಂಪನ ಕಟ್ಟೆ ಎಂಬಲ್ಲಿ ಚಿರತೆಯ ಸೆರೆಗೆ ಬೋನು ಇರಿಸಿದ್ದಾರೆ. ಆದರೆ ಈವರೆಗೆ ಚಿರತೆ ಸೆರೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story





