ಕುಂದಾಪುರ ಸರ್ವೇ ಇಲಾಖೆಯಲ್ಲಿ ಲೋಕಾಯುಕ್ತ ಪರಿಶೀಲನೆ

ಕುಂದಾಪುರ: ಲೋಕಾಯುಕ್ತ ಮಂಗಳೂರು ವಿಭಾಗದ ಪೊಲೀಸ್ ಅಧಿಕಾರಿಗಳ ದಾಳಿ ಶುಕ್ರವಾರವೂ ಮುಂದುವರಿದಿದ್ದು, ಪುರಸಭೆ, ತಹಶಿಲ್ದಾರ್ ಕಚೇರಿ ಬಳಿಕ ಕುಂದಾಪುರದ ಸರ್ವೇ ಇಲಾಖೆಯ ಕಚೇರಿಗೆ ದಾಳಿ ನಡೆಸಿ, ಬಾಕಿ ಇರುವಂತಹ ಅರ್ಜಿಗಳನ್ನು ಪರಿಶೀಲಿಸಿದರು.
ಇಲ್ಲಿನ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಬೆಳಗ್ಗೆ ಬಂದ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ಮಂಜುನಾಥ್ ಶಂಕರಳ್ಳಿ ನೇತೃತ್ವದ ತಂಡವು ಸಂಜೆಯವರಿಗೂ ಪರಿಶೀಲನೆ ನಡೆಸಿತು. ಸಿಬಂದಿ ರಾಘವೇಂದ್ರ ಹೊಸ್ಕೋಟೆ, ಆದರ್ಶ, ರಾಘವೇಂದ್ರ ಸಾಲಿಗ್ರಾಮ, ಸೂರಜ್ ಕಾಪು, ರವೀಂದ್ರ ಗಾಣಿಗ, ಅರುಣ್ ಕುಮಾರ್ ಈ ಕಾರ್ಯಾಚರಣೆಯಲ್ಲಿದ್ದರು.
Next Story




