ಮಲ್ಪೆ | ಅಂದರ್ ಬಾಹರ್: ಎಂಟು ಮಂದಿ ಬಂಧನ

ಮಲ್ಪೆ, ನ.14: ಹನುಮಾನ್ ನಗರ ಎಂಬಲ್ಲಿ ಗುರುವಾರ ಸಂಜೆ ವೇಳೆ ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ಎಂಟು ಮಂದಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಉಮೇಶ್, ಸಿದ್ರಾಮೇಶ, ಹನುಮೇಶ, ಮಲ್ಲಿಕಾರ್ಜುನ ಹಡಪದ, ಶಿವಪ್ಪ ಸರದಾರ, ವಿರೂಪಾಕ್ಷ, ಬಸವರಾಜ, ಜಗದೀಶ ಬಂಧಿತ ಆರೋಪಿಗಳು. ಇವರಿಂದ 5,860 ರೂ. ನಗದು, ಮೂರು ಮೊಬೈಲ್ ಫೋನು, ಒಂದು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





