ಮಲ್ಪೆ ಮೀನುಗಾರಿಕಾ ಬಂದರಿನ ಪ್ರವೇಶದ್ವಾರ ನಿರ್ಮಾಣ ಕಾಮಗಾರಿ; ಪರ್ಯಾಯ ಮಾರ್ಗ

ಉಡುಪಿ, ಡಿ.19: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮಲ್ಪೆ ಮೀನುಗಾರಿಕಾ ಬಂದರಿನ ಆಧುನೀಕರಣ ಕಾಮಗಾರಿಗಳಲ್ಲಿ ಒಂದಾದ ಮಲ್ಪೆ ಮೀನುಗಾರಿಕಾ ಬಂದರಿನ ಮುಖ್ಯ ಪ್ರವೇಶದ್ವಾರವನ್ನು ಪುನರ್ ನಿರ್ಮಾಣ ಕಾಮಗಾರಿಯನ್ನು ಡಿ.22ರಿಂದ ಪ್ರಾರಂಭಿಸಲಾಗುವುದು.
ಈ ಹಿನ್ನೆಲೆಯಲ್ಲಿ ಬಂದರನ್ನು ಪ್ರವೇಶಿಸುವ ಎಲ್ಲಾ ವಾಹನಗಳು ಮಲ್ಪೆ ಜಂಕ್ಷನ್‌ನಿಂದ ಶಿವಸಾಗರ್ ಹೋಟೆಲ್ ಮಾರ್ಗವಾಗಿ ರಾಜ್‌ಫಿಶ್ ಮಿಲ್ ಕ್ರಾಸ್ ಮೂಲಕ ಹಾಗೂ ಕೊಳ ಹನುಮಾನ್ ನಗರ ರಸ್ತೆ ಮೂಲಕ ಕೊಚ್ಚಿನ್ ಶಿಪ್‌ಯಾರ್ಡ್ ಬಳಿ ಇರುವ (ಬಂದರಿನ ಹಿಂದಿನ) ಗೇಟ್ ಮೂಲಕ ಮಲ್ಪೆ ಬಂದರನ್ನು ಪ್ರವೇಶಿಸಬೇಕು.
ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಮಲ್ಪೆ ಮೀನುಗಾರಿಕಾ ಬಂದರು ಯೋಜನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





