ಮಲ್ಪೆ: ಕುಸಿದು ಬಿದ್ದು ವ್ಯಕ್ತಿ ಮೃತ್ಯು; ವಿದ್ಯುತ್ ಆಘಾತದ ಶಂಕೆ

ಉಡುಪಿ: ನೆಲವನ್ನು ವಿದ್ಯುತ್ ಪ್ರೆಷರ್ ಪಂಪ್ ಮೂಲಕ ತೊಳೆಯುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ಮಲ್ಪೆ ಠಾಣಾ ವ್ಯಾಪ್ತಿಯ ಮೂಡುಬೆಟ್ಟಿನ ಚಂದ್ರಕಟ್ಟಾ ಬಳಿ ನಡೆದಿದೆ.
ಮೃತರನ್ನು ಕೊಡವೂರಿನ ಮದ್ವನಗರ ನಿವಾಸಿ ಶಿವಶಂಕರ್(50) ಎಂದು ಗುರುತಿಸಲಾಗಿದೆ. ಅವಿವಾಹಿತರಾಗಿರುವ ಇವರು, ಸಂಬಂಧಿಕರ ಮನೆಯ ಸ್ವಚ್ಛತಾ ಕೆಲಸಕ್ಕೆ ತೆರಳಿದ್ದು, ಅಲ್ಲಿ ವಿದ್ಯುತ್ ಪ್ರೆಷರ್ ಪಂಪ್‌ನಲ್ಲಿ ನೆಲ ತೊಳೆ ಯುತ್ತಿದ್ದಾಗ ಅಲ್ಲೇ ಕುಸಿದು ಬಿದ್ದರು.
ಇವರನ್ನು ಕೂಡಲೇ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಪರೀಕ್ಷಿಸಿದ ವೈದ್ಯರು ಶಿವಶಂಕರ್, ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ನೀರಿನಲ್ಲಿ ನಿಂತು ಕೆಲಸ ಮಾಡಿಕೊಂಡಿದ್ದ ಇವರು ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಸ್ಥಳ ಮಲ್ಪೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Next Story





