Malpe | ಸಮವಸ್ತ್ರದ ಪಥ ಸಂಚಲನದಿಂದ ಸಮಾನತೆ ಅಸಾಧ್ಯ : ಜಯನ್ ಮಲ್ಪೆ

ಮಲ್ಪೆ, ಡಿ.7: ಮನಸ್ಸೆಲ್ಲ ವಿಕಾರ, ದೇಹದಲ್ಲಿ ಶಿಸ್ತಿನ ಸಿಪಾಯಿಗಳಂತೆ ಸಮವಸ್ತ್ರ ಧರಿಸಿ ಬೀದಿಬೀದಿಗಳಲ್ಲಿ ಪಥ ಸಂಚಲನ ನಡೆಸಿದರೆ ದೇಶದಲ್ಲಿ ಸಮಾನತೆ ಮೂಡಿಸಲು ಸಾಧ್ಯವಿಲ್ಲ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.
ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ವತಿಯಿಂದ ಅಂಬೇಡ್ಕರ್ ಪರಿಬ್ಬಾಣದ ಪ್ರಯುಕ್ತ ಶನಿವಾರ ಮಲ್ಪೆಯಲ್ಲಿ ಆಯೋಜಿಸಲಾದ ಅಂಬೇಡ್ಕರ್ ಕಡೆಗೆ ನಮ್ಮ ನಡಿಗೆ ಎಂಬ ಕ್ಯಾಂಡಲ್ ಮೆರವಣಿಗೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಈ ದೇಶದಲ್ಲಿ ಸಮಾನತೆಯನ್ನು ಒಪ್ಪದ ಆರೆಸ್ಸೆಸ್ ಶಿಸ್ತಿನ ಹೆಸರಿನಲ್ಲಿ ಜೀವ ವಿರೋಧಿ ಕೆಲಸ ಮಾಡುತ್ತಾ ದಲಿತರನ್ನು ಮತ್ತು ಹಿಂದುಳಿದವರನ್ನು ಬ್ರೈನ್ವಾಶ್ ಮಾಡಲು ಬೈಠಕ್ ಗಳನ್ನು ನಡೆಸುತ್ತಿದೆ. ಶಿಸ್ತಿನ ಹೆಸರಿನಲ್ಲಿ ಯಾರೋ ಹಾಕಿದ ಗೆರೆಯನ್ನು ದಾಟದೆ ಹೋಗುವ ಅಮಾಯಕರನ್ನು ಧರ್ಮದ ಹೆಸರಿನಲ್ಲಿ ಜೈಲಿಗೆ ತಳುತ್ತಿದ್ದಾರೆ ಎಂದು ಅವರು ಟೀಕಿಸಿದರು.
ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಮಾತನಾಡಿ, ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದ ಅಸಮಾನತೆ ಹೆಚ್ಚಾಗಿದ್ದು, ಶಿಕಣವನ್ನು ಇಂದು ವ್ಯಾಪಾರಿಕಾರೀಕರಣ ಮಾಡಲಾಗುತ್ತಿದೆ. ಜೊತೆಗೆ ಶಿಕಣದ ಹಕ್ಕನ್ನು ಕಸಿದುಕೊಂಡು ಸರಕಾರಿ ಶಾಲೆಯನ್ನು ಮುಚ್ಚುವ ಹಂತಕ್ಕೆ ಬಂದಿದ್ದಾರೆ. ಅಂಬೇಡ್ಕರ್ ಅವರ ಚಿಂತನೆಯನ್ನು ಮೈಗೂಡಿಸಿ ಹೋರಾಡದಿದ್ದರೆ ದಲಿತರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಮುಖ್ಯವಾಹಿನಿಗೆ ಬರಲಾರರು ಎಂದರು.
ದಲಿತ ಹಕ್ಕುಗಳ ಹೋರಾಟ ಸುತಿಯ ಉಡುಪಿ ಜಿಲ್ಲಾಧ್ಯಕ್ಷ ಸಂಜೀವ ಬಳ್ಕೂರು ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರ ದಲಿತರಿಗೆ ಮೀಸಲಾತಿಯಲ್ಲಿ ಅನ್ಯಾಯ ಮಾಡುತ್ತಿದೆ. ದಲಿತ ಚಳುವಳಿ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಗಾಗಿ ಹೋರಾಟ ನಡೆಸಬೇಕಾಗಿದೆ ಎಂದು ತಿಳಿಸಿದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ, ರಮೇಶ್ ಕಾಂಚನ್, ಮಹಾಬಲ ಕುಂದರ್, ಸತೀಶ್ ನಾಯ್ಕ, ರಮೇಶ್ ತಿಂಗಳಾಯ, ವೆಂಕಟೇಶ್ ಕುಲಾಲ್, ಮಂಜುನಾಥ, ಶರತ್ ಶೆಟ್ಟಿ, ಮೀನಾಕ್ಷಿ ಮಾಧವ, ಉಷಾ, ಸತೀಶ್ ಮಂಚಿ, ಮಾಧವ ಬನ್ನಂಜೆ, ಸತೀಶ್ ಕೊಡವೂರು, ಸುದರ್ಶನ್ ಪಡುಕರೆ, ಯಾದವ ಅಮೀನ್ ಕೊಳ, ಹರೀಶ್ ಸಾಲ್ಯಾನ್, ಸಂತೋಷ್ ಕಪ್ಪೆಟ್ಟು, ರವಿರಾಜ್ ಲಕ್ಮೀನಗರ, ದಯಾಕರ ಮಲ್ಪೆ, ಸಾಧು ಚಿಟ್ಪಾಡಿ, ಕೃಷ್ಣ ಶ್ರೀಯಾನ್, ಸುಮಿತ್ ನೆರ್ಗಿ, ಗುಣವಂತ ತೋಟ್ಟಂ, ಭಗವಾನ್, ವಿನಯ ಬಲರಾಮನಗರ, ಸತೀಶ್ ಕಪ್ಪೆಟ್ಟು, ದೀಪಕ್, ಸಂದ್ಯಾ ಕೃಷ್ಣ, ಪೂರ್ಣಿಮ, ಸಂದ್ಯಾ ತಿಲಕ್, ಪ್ರಮೀಳಾ, ಶಶಿಕಲಾ ತೊಟ್ಟಂ, ವಿನಯ ಕೊಡಂಕೂರು, ವಿನೋದ ಮುಂತಾದವರು ಉಪಸ್ಥಿತರಿದ್ದರು.







