ಗೂಡ್ಸ್ ರೈಲು ಢಿಕ್ಕಿ: ವ್ಯಕ್ತಿ ಮೃತ್ಯು

ಬೈಂದೂರು: ಕೆರ್ಗಾಲ್ ಗ್ರಾಮದ ಚರುಮಕ್ಕಿ ರೈಲ್ವೆಗೇಟ್ ಸಮೀಪ ನಡೆದುಕೊಂಡು ಹೋಗುತಿದ್ದ ವ್ಯಕ್ತಿಯೊಬ್ಬರು ಗೂಡ್ಸ್ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಘಟನೆ ಮಂಗಳವಾರ ಅಪರಾಹ್ನದ ವೇಳೆ ನಡೆದಿದೆ.
ಮೃತರನ್ನು ಕೆರ್ಗಾಲ್‌ನ ಉದಯ ದೇವಾಡಿಗ (44) ಎಂದು ಗುರುತಿಸಲಾಗಿದೆ. ಕಂಬದಕೋಣೆಯ ಹೊಟೇಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಉದಯ ದೇವಾಡಿಗರಿಗೆ ಕಿವಿ ಸರಿಯಾಗಿ ಕೇಳಿಸುತ್ತಿರಲಿಲ್ಲ ಎನ್ನಲಾಗಿದೆ. ಇದರಿಂದ ರೈಲ್ವೇ ಹಳಿ ಬದಿ ನಡೆದುಕೊಂಡು ಹೋಗುತಿದ್ದ ಇವರಿಗೆ ರೈಲು ಬರುತ್ತಿರುವುದು ತಿಳಿಯಲಿಲ್ಲ ಎಂದು ಹೇಳಲಾಗಿದೆ.
ರೈಲು ಬಡಿದು ಗಾಯ ಗೊಂಡಿದ್ದ ಉದಯರನ್ನು ಬೈಂದೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದರೂ ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





