ಬ್ರಹ್ಮಾವರ: ತಾಳೆಮರದಿಂದ ಬಿದ್ದು ವ್ಯಕ್ತಿ ಸಾವು

ಸಾಂದರ್ಭಿಕ ಚಿತ್ರ
ಬ್ರಹ್ಮಾವರ: ತಾಳೆ ಹಣ್ಣು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಹಾರಾಡಿ ಗ್ರಾಮದ ಹೊನ್ನಾಳ ಕುಕ್ಕುಡೆಯ ಕೀರ್ತಿನಗರ ನಿವಾಸಿ ಉಮೇಶ (48) ಎಂಬವರು ಕುಕ್ಕುಡೆಯಲ್ಲಿ ತಾಳೆ ಮರ ಹತ್ತಿ ತಾಳೆ ಬೊಂಡ ಕೊಯ್ಯುವಾಗ ಆಯತಪ್ಪಿ ಕಾಲುಜಾರಿ ಸುಮಾರು 20 ಅಡಿ ಕೆಳಗೆ ಬಿದ್ದು, ಕುತ್ತಿಗೆ ಮೂಳೆ ಮುರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಘಟನೆ ನ.7ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಡೆದಿದ್ದು, ತಕ್ಷಣವೇ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ನ.13ರಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





