ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಸಾಂದರ್ಭಿಕ ಚಿತ್ರ
ಬ್ರಹ್ಮಾವರ, ನ.10: ಬಾವಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನ.9ರಂದು ಸಂಜೆ ವೇಳೆ ಹೊಸೂರು ಗ್ರಾಮದ ಕರ್ಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಹೊಸೂರು ಗ್ರಾಮದ ಪುಟ್ಟ ಎಂದು ಗುರುತಿಸಲಾಗಿದೆ.
ಪುಟ್ಟ ಪೇಟೆಗೆ ಸಾಮಾನು ತರಲು ಹೋದವರು ಮನೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದರು. ಹುಡುಕಾಡಿದಾಗ ಮನೆಗೆ ಬರುವ ಕಾಲುದಾರಿಯ ಗೇರುಬೀಜ ಕಾರ್ಖಾನೆಯ ಸಮೀಪ ಆವರಣ ಇಲ್ಲದ ಬಾವಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





