ಮಂಗಳೂರು ವಿವಿ ಅಂತರ ಕಾಲೇಜು ಪುರುಷರ, ಮಹಿಳೆಯರ ಅತ್ಲೆಟಿಕ್ಸ್; 472 ಅಂಕಗಳೊಂದಿಗೆ ಆಳ್ವಾಸ್ ಮೂಡಬಿದ್ರೆ ಸಮಗ್ರ ಚಾಂಪಿಯನ್

►ಆರು ಕೂಟ ದಾಖಲೆ
ಉಡುಪಿ: ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ 45ನೇ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಅತ್ಲೆಟಿಕ್ ಕ್ರೀಡಾಕೂಟದಲ್ಲಿ ನಿರೀಕ್ಷೆಯಂತೆ ಒಟ್ಟಾರೆಯಾಗಿ 472 ಅಂಕಗಳನ್ನು ಸಂಗ್ರಹಿಸಿದ ಆಳ್ವಾಸ್ ಕಾಲೇಜು ಮೂಡಬಿದರೆ ತಂಡ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಇದೇ ಮೊದಲ ಬಾರಿ ನೀಡಲಾದ ಪ್ರೊ.ಕಿಶೋರ್‌ಕುಮಾರ್ ಸಿ.ಕೆ. ಸ್ಮಾರಕ ಬೆಳ್ಳಿಯ ರೋಲಿಂಗ್ ಟ್ರೋಫಿಯನ್ನು ಗೆದ್ದುಕೊಂಡಿತು.
ಇದರೊಂದಿಗೆ ಪುರುಷರ ವಿಭಾಗದಲ್ಲಿ 265 ಅಂಕ ಸಂಗ್ರಹಿಸಿದ ಆಳ್ವಾಸ್ ತಂಡ ಚಾಂಪಿಯನ್‌ಗಿರುವ ಸೈಂಟ್ ಫಿಲೋಮಿನಾ ಕಾಲೇಜು ಅಸೋಸಿಯೇಷನ್ ಟ್ರೋಫಿ ಪಡೆದರೆ, 207 ಅಂಕ ಗಳಿಸಿದ ಆಳ್ವಾಸ್ ಕಾಲೇಜಿನ ಮಹಿಳಾ ತಂಡವೂ ಅಕಾಡೆಮಿ ಆಫ್ ಜನರಲ್ ಎಜ್ಯುಕೇಷನ್ ಟ್ರೋಫಿಯನ್ನು ಕೈಗೆತ್ತಿಕೊಂಡಿತು.
ಸಮಗ್ರ ವಿಭಾಗದ ಒಟ್ಟು 163 ಅಂಕಗಳಿಸಿದ ಎಸ್‌ಡಿಎಂ ಉಜಿರೆ ತಂಡ ರನ್ನರ್‌ಅಪ್ ಪ್ರಶಸ್ತಿ ಪಡೆದರೆ, 47 ಅಂಕಗಳೊಂದಿಗೆ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ತೃತೀಯ ಸ್ಥಾನಿಯಾಯಿತು. ಪುರುಷ ವಿಭಾಗದಲ್ಲಿ 83 ಅಂಕಗಳಿಸಿದ ಎಸ್‌ಡಿಎಂ ತಂಡ ರನ್ನರ್ ಅಪ್ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಮಹಿಳಾ ವಿಭಾಗದಲ್ಲಿ ಆತಿಥೇಯ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ತಂಡ 80 ಅಂಕಗಳೊಂದಿಗೆ ರನ್ನರ್ ಅಫ್ ಪ್ರಶಸ್ತಿಗೆ ಭಾಜನವಾಯಿತು.
ಕೂಟದ ವೇಗದ ಓಟಗಾರರು: ತೆಂಕನಿಡಿಯೂರು ಸರಕಾರಿ ಕಾಲೇಜಿನ ಧನುಷ್ ಕುಡ್ತಾರ್ಕರ್ ಹಾಗೂ ಆಳ್ವಾಸ್‌ನ ಪರೀಕ್ಷಾ ಕ್ರೀಡಾಕೂಟದ ವೇಗದ ಓಟಗಾರರಾಗಿ ಮೂಡಿಬಂದರು. ಪುರುಷರ ವಿಭಾಗದ 100 ಮೀ. ಓಟದಲ್ಲಿ ಧನುಷ್ ಅವರು 10.5ಸೆ.ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದು ಬೀಗಿದರೆ, ಮಹಿಳೆಯರ ವಿಭಾಗದಲ್ಲಿ ಪರೀಕ್ಷಾ ಅವರು 12.6ಸೆ.ಗಳಲ್ಲಿ ಮೊದಲಿಗರಾಗಿ ದೂರ ಕ್ರಮಿಸಿ ಕೂಟದ ವೇಗದ ಓಟಗಾರ್ತಿ ಎನಿಸಿದರು.
ಸಮಾರೋಪ ಸಮಾರಂಭದಲ್ಲಿ ಮೂಡಬಿದರೆ ಆಳ್ವಾಸ್ ಕಾಲೇಜು ಟ್ರಸ್ಟ್ ಅಧ್ಯಕ್ಷ ವಿವೇಕ್ ಆಳ್ವ, ಉಡುಪಿಯ ಉದ್ಯಮಿ ಹರಿಯಪ್ಪ ಕೋಟ್ಯಾನ್, ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಡಾ ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲರು ಪ್ರೊ. ಸೋಜನ್ ಕೆ.ಜಿ, ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು ಕೃಷ್ಣ ಭಟ್, ಐಕ್ಯೂಎಸಿ ಸಂಚಾಲಕರಾದ ಪ್ರೊ. ಶ್ರೀಮತಿ ಅಡಿಗ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ರಾಜೇಂದ್ರ ಕೆ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ಉಪಸ್ಥಿತರಿದ್ದರು.
ಕೂಟದ ಶ್ರೇಷ್ಠ ಅತ್ಲೀಟ್‌ಗಳು
ಕೂಟದ ಅತ್ಯುತ್ತಮ ಪುರುಷ ಕ್ರೀಡಾಪಟು ಪ್ರಶಸ್ತಿ 100ಮೀ. ಓಟದಲ್ಲಿ 10.5ಸೆ.ಗಳ ಸಾಧನೆ ಮಾಡಿದ ತೆಂಕನಿಡಿಯೂರು ಸರಕಾರಿ ಕಾಲೇಜಿನ ಕ್ರೀಡಾಪಟು ಧನುಷ್ ಕುಡ್ತಾರ್ಕರ್ ಪಾಲಾದರೆ, ಮಹಿಳಾ ವಿಭಾಗದ ಅತ್ಯುತ್ತಮ ಅತ್ಲೀಟ್ ಪ್ರಶಸ್ತಿ ಆಳ್ವಾಸ್‌ನ ದೀಕ್ಷಿತಾ ರಾಮಕೃಷ್ಣ ಗೌಡರ ಪಾಲಾಯಿತು. ಅವರು 400ಮೀ. ಹರ್ಡಲ್ಸ್‌ನಲ್ಲಿ 1:01.42ಸೆ.ಗಳ ಸಾದನೆಯೊಂದಿಗೆ ಗುರಿಮುಟ್ಟಿ ಚಿನ್ನದ ಪದಕ ಜಯಿಸಿದ್ದರು.
ಕೂಟದಲ್ಲಿ ಆರು ಹೊಸ ದಾಖಲೆಗಳು
ಡಾ.ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದ 45ನೇ ಅಧ್ಯಾಯದಲ್ಲಿ ಒಟ್ಟು ಆರು ಹೊಸ ದಾಖಲೆಗಳು ಹೊಸದಾಗಿ ಬರೆಯಲ್ಪಟ್ಟವು. ಆರೂ ದಾಖಲೆಗಳನ್ನು ಆಳ್ವಾಸ್ ಕಾಲೇಜಿನ ಕ್ರೀಡಾಪಟುಗಳೇ ಬರೆದಿರುವುದು ಈ ಬಾರಿಯ ವಿಶೇಷ.
ಅಂಕಿತ್ ಅವರು ಪುರುಷರ ಶಾಟ್‌ಪುಟ್‌ನಲ್ಲಿ 18.20ಮೀ. ದೂರ ಗುಂಡನ್ನು ಎಸೆದು 2023-24ರಲ್ಲಿ ಅದೇ ಕಾಲೇಜಿನ ಸಾವನ್ ಅವರು ಸ್ಥಾಪಿಸಿದ 17.82ಮೀ. ದಾಖಲೆಯನ್ನು ಅಳಿಸಿ ತನ್ನ ಹೆಸರಿಗೆ ಬರೆಸಿಕೊಂಡರು. ಆಳ್ವಾಸ್‌ನ ನಾಗೇಂದ್ರ ಅಣ್ಣಪ್ಪ ನಾಯ್ಕ್ ಅವರು ಡಿಸ್ಕಸ್ ಎಸೆತದಲ್ಲಿ 53.93 ಮೀ. ಸಾಧನೆಯೊಂದಿಗೆ 2016-17ನೇ ಸಾಲಿನಲ್ಲಿ ಲಕ್ವಿಂದರ್ ಸಿಂಗ್ ಸ್ಥಾಪಿಸಿದ 53.16 ಮೀ. ದಾಖಲೆಯನ್ನು ಅಳಿಸಿದರು.
ಕೃಷಿಕ್ ಎಂ. ಅವರು ಪುರುಷರ 110ಮೀ. ಹರ್ಡಲ್ಸ್‌ನಲ್ಲಿ ಮೂರನೇ ದಾಖಲೆ ಬರೆದರು. ಅವರು 14.3ಸೆ.ಗಳಲ್ಲಿ ದೂರವನ್ನು ಕ್ರಮಿಸುವ ಮೂಲಕ ಸಮರ್ಥ ಸದಾಶಿವ ಅವರು 2015-16ರಲ್ಲಿ ಸ್ಥಾಪಿಸಿದ 14.50ಸೆ.ಗಳ ದಾಖಲೆಯನ್ನು ಮುರಿದರು.
ಮಹಿಳೆಯರ 10,000ಮೀ.ಓಟದಲ್ಲಿ ನಿರ್ಮಲ ಅವರು 35:15.9ಸೆ.ಗಳ ಹೊಸ ದಾಖಲೆ ಬರೆದರು. ಅವರು ಲಕ್ಷ್ಮೀ ಅವರು 2021-22ರಲ್ಲಿ ಬರೆದ 35:54.9ಸೆ.ಗಳ ದಾಖಲೆ ಅಳಿಸಿದರು. ಅದೇ ರೀತಿ ನಿಧಿ ಯಾದವ್ ಅವರು ಹ್ಯಾಮರ್ ತ್ರೋನಲ್ಲಿ 57.63ಮೀ.ಗಳ ಸಾಧನೆಯೊಂದಿಗೆ ಶೃತಿ ಸಿಂಗ್ ಅವರು ಕಳೆದ ವರ್ಷ ಬರೆದ 57.20ಮೀ.ಗಳ ದಾಖಲೆಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡರು.
ಪುರುಷರ 400ಮೀ. ರಿಲೇ ಸ್ಪರ್ಧೆಯಲ್ಲಿ ಆಳ್ವಾಸ್ ತಂಡ 2:57.63ಸೆ.ಗಳ ಹೊಸ ದಾಖಲೆ ಬರೆದು ತಮ್ಮದೇ ಕಾಲೇಜಿನ ಹೆಸರಿನಲ್ಲಿ 2018-19ರಿಂದ ಇರುವ 3:17.7ಸೆ.ಗಳ ದಾಖಲೆಯನ್ನು ಉತ್ತಮ ಪಡಿಸಿದರು.
ಮಂಗಳೂರು ವಿವಿ ಕ್ರೀಡಾಕೂಟದ ಎರಡನೇ ದಿನದ ಫಲಿತಾಂಶಗಳು
ನಗರದ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ 45ನೇ ಮಂಗಳೂರು ವಿಶ್ವವಿದ್ಯಾನಿಲಯ ಅಂತರ ಕಾಲೇಜು ಪುರುಷ ಮತ್ತು ಮಹಿಳೆಯರ ಅತ್ಲೆಟಿಕ್ ಕ್ರೀಡಾಕೂಟದ ಎರಡನೇ ದಿನದ ಫಲಿತಾಂಶಗಳ ವಿವರ.
ಪುರುಷರ ವಿಭಾಗ:
100ಮೀ.: 1.ಧನುಷ್ ಕೆ. ತೆಂಕನಿಡಿಯೂರು ಕಾಲೇಜು (10.5ಸೆ.), 2.ವಿಭಾಸ್ಕರ್ ಕುಮಾರ್ ಆಳ್ವಾಸ್ ಮೂಡಬಿದರೆ, 3. ಮಂಜು ಎಂ. ಎಸ್‌ಡಿಎಂ ಉಜಿರೆ. 200ಮೀ.: 1.ಅಂಕಿತ್ ಜೋಗಿ ಎಂಜಿಎಂ ಕಾಲೇಜು ಉಡುಪಿ (21.5ಸೆ.), 2.ನಯನ್ ಸುನಿಲ್ ಶಾ ಆಳ್ವಾಸ್ ಮೂಡಬಿದರೆ, 3.ಆಯುಷ್ ಆರ್.ದೇವಾಡಿಗ ಕೆನರಾ ಕಾಲೇಜು ಮಂಗಳೂರು.
400ಮೀ:1.ಆಕಾಶ್ ರಾಜ್ ಆಳ್ವಾಸ್ ಮೂಡಬಿದರೆ (47.67ಸೆ.), 2.ಸಾಕೇತ್ ಮಿಂಜ್ ಆಳ್ವಾಸ್, 3.ಸಾಹಿಲ್ ಯಾದವ್ ತೆಂಕನಿಡಿಯೂರು ಕಾಲೇಜು. 1,500ಮೀ.:1.ಡಿ.ಪ್ರಥಮೇಶ್ ಆಳ್ವಾಸ್ (4:10.56ಸೆ.), 2.ಅಮನ್ ಕುಮಾರ್ ಆಳ್ವಾಸ್, 3.ಆದಿತ್ಯ ಎನ್.ಪಿ. ಎಸ್‌ಡಿಎಂ ಉಜಿರೆ.
10,000ಮೀ.: 1.ಮೋಹಿತ್ ಚೌಧುರಿ ಆಳ್ವಾಸ್ (31:01.9ಸೆ.), 2. ಶುಭಂ ಬಲಿಯಾಮ್ ಆಳ್ವಾಸ್, 3.ಚೆನ್ನಕೇಶವ ಎಸ್‌ಡಿಎಂ ಉಜಿರೆ. ಹೈಜಂಪ್: 1.ಶ್ಯಾಮ್‌ಸುಂದರ್ ಆಳ್ವಾಸ್ (2:00ಮೀ.), 2.ಧರ್ಮೇಂದ್ರ ಆಳ್ವಾಸ್, 3.ಪ್ರಿನ್ಸ್ ಜಂಗ್ರಿಡ್ ಗೋವಿಂದದಾಸ್ ಕಾಲೇಜು ಸುರತ್ಕಲ್.
ಲಾಂಗ್‌ಜಂಪ್: 1.ಪುರುಷೋತ್ತಮ್ ಆಳ್ವಾಸ್ (7.24ಮೀ.), 2.ಮಾರುತಿ ಎಂ.ಎಲ್., ಎಸ್‌ಡಿಎಂ ಉಜಿರೆ, 3.ಯಶ್ವಿನ್ ಸೈಂಟ್ ಫಿಲೋಮಿನಾ ಪುತ್ತೂರು. ಜಾವೆಲಿನ್ ಎಸೆತ: 1.ದಿಂಪಾಶು ಶರ್ಮ ಆಳ್ವಾಸ್ (60.64ಮೀ.), 2.ಕಿಶೋರ್ ಎಸ್‌ಡಿಎಂ ಉಜಿರೆ, 3.ಅಭಿಷೇಕ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟೇಶ್ವರ.
ಶಾಟ್‌ಪುಟ್: 1.ಅನಿಕೇತ್, ಆಳ್ವಾಸ್ (18.20ಮೀ.), 2.ಆಕಾಶ್ ಎಸ್.ಕುಂದರ್ ಎಸ್‌ಡಿಎಂ ಉಜಿರೆ, 3.ಪ್ರಖ್ಯಾತ್ ಕೆ.ಪೂಜಾರಿ ಎಂಜಿಎಂ ಕಾಲೇಜು ಉಡುಪಿ. ಡಿಸ್ಕಸ್ ಎಸೆತ: 1.ನಾಗೇಂದ್ರ ಅಣ್ಣಪ್ಪ ನಾಯ್ಕ್ ಆಳ್ವಾಸ್ (53.93ಮೀ.), ಉಜ್ವಲ್ ಚೌಧುರಿ ಆಳ್ವಾಸ್. 3.ಸಾಕ್ಷಾತ್ ಶೆಟ್ಟಿ ಭಂಡಾರ್‌ಕಾರ್ಸ್ ಕಾಲೇಜು ಕುಂದಾಪುರ.
ಹ್ಯಾಮರ್ ಎಸೆತ:1.ಮಹಮ್ಮದ್ ನದೀಮ್ ಆಳ್ವಾಸ್ (62.33ಮೀ.), 2.ಹಿಮಾಂಶು ಆಳ್ವಾಸ್, 3.ತನುಷ್, ಎಸ್‌ಎಂಎಸ್ ಕಾಲೇಜು ಬ್ರಹ್ಮಾವರ. ಟ್ರಿಪಲ್ ಜಂಪ್: 1.ಪ್ರದೀಪ್‌ಕುಮಾರ್ ಆಳ್ವಾಸ್ (14.95ಮೀ.), 2.ಕಿಶನ್ ಕುಮಾರ್ ಎಸ್‌ಡಿಎಂ ಉಜಿರೆ, 3.ಮಾರುತಿ ಎಂ.ಎಲ್. ಎಸ್‌ಡಿಎಂ ಉಜಿರೆ.
110ಮೀ.ಹರ್ಡಲ್ಸ್: 1.ಕೃಷಿಕ್ ಎಂ., ಆಳ್ವಾಸ್ (14.3ಸೆ.), 2.ಸುಶಾಂತ್ ಎಂ.ಡಿ. ಆಳ್ವಾಸ್, 3.ಸೃಜನ್ ಜಿ.ಪಿ. ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರು. 400ಮೀ. ಹರ್ಡಲ್ಸ್: 1.ಆಯನ್ ಪ್ರಜ್ವಲ್ ಕಶ್ಯಪ್ ಆಳ್ವಾಸ್ (53.3ಸೆ.), 2.ರಕ್ಷಿತ್ ನಾಯಕ್ ಆಳ್ವಾಸ್, 3. ಕಿಶನ್ ಡಿ. ಎಸ್‌ಡಿಎಂ ಉಜಿರೆ.
ಪೋಲ್‌ವಾಲ್ಡ್:1. ಅಮನ್ ಸಿಂಗ್ ಆಳ್ವಾಸ್ (4ಮೀ.), 2.ಶ್ರೇಯಸ್ ತೆಂಕನಿಡಿಯೂರು ಕಾಲೇಜು, 3. ತಿಮ್ಮಣ್ಣ ಗೌಡ ತೆಂಕನಿಡಿಯೂರು ಕಾಲೇಜು ಉಡುಪಿ. ಡೆಕಾತ್ಲಾನ್: 1.ಸನತ್ ಬಿ.ಎಸ್. ಆಳ್ವಾಸ್ (5360 ಪಾಯಿಂಟ್), 2.ಸೂರ್ಯ ಆಳ್ವಾಸ್, 3.ಯಶ್ವಿನ್ ಸೈಂಟ್ ಫಿಲೋಮಿನಾ ಕಾಲೇಜು ಪುತ್ತೂರು.
100ಮೀ. ರಿಲೇ: 1.ತೆಂಕನಿಡಿಯೂರು ಸರಕಾರಿ ಕಾಲೇಜು ಉಡುಪಿ (41.3ಸೆ.), 2.ಆಳ್ವಾಸ್ ಮೂಡಬಿದರೆ, 3.ಎಂಜಿಎಂ ಉಡುಪಿ. 400ಮೀ. ರಿಲೇ: 1.ಆಳ್ವಾಸ್ ಕಾಲೇಜ್ ಮೂಡಬಿದರೆ (3:14.8ಸೆ.), 2.ತೆಂಕನಿಡಿಯೂರು ಸರಕಾರಿ ಕಾಲೇಜು ಉಡುಪಿ, 3.ಎಸ್‌ಡಿಎಂ ಉಜಿರೆ. 400ಮೀ. ಮಿಕ್ಸೆಡ್ ರಿಲೇ: 1. ಆಳ್ವಾಸ್ ಕಾಲೇಜು ಮೂಡಬಿದರೆ (3:36.9ಸೆ.), 2.ಸೈಂಟ್ ಫಿಲೋಮಿನಾ ಪುತ್ತೂರು, 3.ಎಸ್‌ಡಿಎಂ ಉಜಿರೆ.
ಮಹಿಳೆಯರ ವಿಭಾಗ:
100ಮೀ.: ಪರೀಕ್ಷಾ ಆಳ್ವಾಸ್ (12.6ಸೆ.), 2.ಮಾನಸ ಎ. ಆಳ್ವಾಸ್, 3. ಪ್ರಗತಿ ಎಸ್.ಬಿ. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ. 200ಮೀ.: 1.ಶೃದ್ಧಾ ತೆಂಕನಿಡಿಯೂರು ಸರಕಾರಿ ಕಾಲೇಜು ಉಡುಪಿ (25.3ಸೆ.), 2.ಚೈತ್ರಿಕಾ ಸೈಂಟ್ ಫಿಲೋಮಿನಾ ಪುತ್ತೂರು, 3. ಪಲ್ಲವಿ ಅರೋರಾ ಆಳ್ವಾಸ್.
400ಮೀ.: 1.ಪಲ್ಲವಿ ಅರೋರಾ ಆಳ್ವಾಸ್ (56.7ಸೆ.), 2.ಇಶಾ ರಾಜೇಶ್ ಯಾದವ್ ಆಳ್ವಾಸ್, 3.ಚೈತ್ರಿಕಾ ಸೈಂಟ್ ಫಿಲೋಮಿನಾ ಪುತ್ತೂರು. 1,500ಮೀ.: ಪ್ರಣಮ್ಯ ಆಳ್ವಾಸ್ (4:48.6ಸೆ.), 2.ದಿಶಾ ಕೈಲಾಸ್ ಆಳ್ವಾಸ್, 3.ಯೋಗಿತಾ, ಕೆಎಸ್‌ಎಸ್ ಕಾಲೇಜು ಸುಬ್ರಹ್ಮಣ್ಯ.
10,000ಮೀ.: 1.ನಿರ್ಮಲಾ ಆಳ್ವಾಸ್ (35:15.9), 2.ಭಾಗೀರಥಿ ಆಳ್ವಾಸ್, 3.ಜಯಶ್ರೀ ಎಸ್‌ಡಿಎಂ ಉಜಿರೆ. ಹೈಜಂಪ್: 1.ತೃಶಾನ್ವಿ ಎಂಜಿಎಂ ಕಾಲೇಜು ಉಡುಪಿ, 2.ಅಮೃತ ಕೆ.,ಸೈಂಟ್ ಫಿಲೋಮಿನಾ ಪುತ್ತೂರು, 3.ಅಶ್ವಿನಿ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ.
ಲಾಂಗ್‌ಜಂಪ್: 1.ಪರೀಕ್ಷಾ ಆಳ್ವಾಸ್ (5:73), 2.ತರುಣಿಕಾ ಆಳ್ವಾಸ್, 3.ಅನುಷಾ ಎಸ್.ಎಸ್. ಮಂಗಳೂರು ವಿವಿ ಕ್ಯಾಂಪಸ್ ಮಂಗಳೂರು. ಜಾವೆಲಿನ್ ಎಸೆತ: 1.ಸಾಕ್ಷಿ ಶರ್ಮ ಆಳ್ವಾಸ್ (43.08ಮೀ.), 2.ಜೀವಿತಾ ಎಸ್‌ಡಿಎಂ ಉಜಿರೆ, 3. ವೈಷ್ಣವಿ, ಮಂಗಳೂರು ವಿವಿ ಕ್ಯಾಂಪಸ್ ಮಂಗಳೂರು.
ಡಿಸ್ಕಸ್ ಎಸೆತ:1.ನಿಕ್ಷೀತಾ ಕುಮಾರಿ, ಆಳ್ವಾಸ್ (46.02ಮೀ.), 2. ಮಾಧುರ್ಯ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ, 3.ಐಶ್ವರ್ಯ ಆಳ್ವಾಸ್. ಹ್ಯಾಮರ್ ಎಸೆತ: 1.ನಿಧಿ ಯಾದವ್ ಆಳ್ವಾಸ್ (57.63ಮೀ.), 2.ನೇಹಾ ಸ್ವಾಮಿ ಆಳ್ವಾಸ್, 3.ನಿಶೇಲ್ ಡಿ ಡಿಸೋಜ ವಿವಿ ಕಾಲೇಜು ಮಂಗಳೂರು.
100ಮೀ. ಹರ್ಡಲ್ಸ್:1. ರಕ್ಷಿತಾ ಆಳ್ವಾಸ್ (15.0ಸೆ.), 2.ಅನನ್ಯ ಸರಕಾರಿ ಕಾಲೇಜು ಬಾರಕೂರು, 3. ಪವಿತ್ರಾ ಕುಮಾರಿ, ಸರಕಾರಿ ಮಹಿಳಾ ಕಾಲೇಜು ಪುತ್ತೂರು. 400ಮೀ. ಹರ್ಡಲ್ಸ್: 1.ದೀಕ್ಷಿತಾ ರಾಮಕೃಷ್ಣ ಆಳ್ವಾಸ್ (1:01.40ಸೆ.), 2.ಪ್ರಜ್ಞಾ ಕೆ ಆಳ್ವಾಸ್, 3.ರಿತಿಶಾ ವಿ.ಎಂ. ಎಂಜಿಎಂ ಕಾಲೇಜು ಉಡುಪಿ.
ಶಾಟ್‌ಪುಟ್: 1.ಮಾಧುರ್ಯ, ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ (10.81ಮೀ.), 2.ನಿಶೇಲ್ ಡಿ.ಡಿಸೋಜ ವಿವಿ ಕಾಲೇಜು ಮಂಗಳೂರು, 3.ದೇವಿಕಾ ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ. ಹೆಪ್ಟಾತ್ಲಾನ್: 1.ರಕ್ಷಿತಾ ಆಳ್ವಾಸ್ ಕಾಲೇಜು (4408 ಪಾಯಿಂಟ್), 2.ಪ್ರಗತಿ ಎಸ್.ಬಿ. ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ.
100ಮೀ. ರಿಲೇ: 1.ಆಳ್ವಾಸ್ ಕಾಲೇಜು ಮೂಡಬಿದರೆ (49.9ಸೆ.), 2.ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಉಡುಪಿ, 3.ಎಸ್‌ಡಿಎಂ ಉಜಿರೆ. 400ಮೀ. ರಿಲೇ: 1.ಆಳ್ವಾಸ್ ಮೂಡಬಿದರೆ (4:12.7ಸೆ.), 2. ಎಸ್‌ಡಿಎಂ ಉಜಿರೆ, 3.ಸೈಂಟ್‌ಫಿಲೋಮಿನಾ ಕಾಲೇಜು ಪುತ್ತೂರು.







