ಮಂಗಳೂರು ವಿವಿ ಪುರುಷರ ದೇಹದಾರ್ಢ್ಯ ಸ್ಪರ್ಧೆ: ಆಳ್ವಾಸ್ನ ಪ್ರಥಮ್ ಪೂಜಾರಿ ‘ಮಿ.ಮಂಗಳೂರು ವಿವಿ’

ಉಡುಪಿ, ಅ.22: ನಗರದ ಪೂರ್ಣಪ್ರಜ್ಞ ಸ್ವಾಯತ್ತ ಕಾಲೇಜು, ಮಂಗಳೂರು ವಿಶ್ವ ವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ ಕಾಲೇಜಿನ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಮಂಗಳೂರು ವಿವಿ ಮಟ್ಟದ ಪುರುಷರ ಅಂತರ ಕಾಲೇಜು ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೂಡಬಿದ್ರೆಯ ಆಳ್ವಾಸ್ ಕಾಲೇಜು ತಂಡ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಆಳ್ವಾಸ್ ಕಾಲೇಜಿನ ಪ್ರಥಮ್ ಪೂಜಾರಿ ಅವರು ಟೂರ್ನಿಯ ಅತ್ಯುತ್ತಮ ದೇಹದಾರ್ಢ್ಯ ಪಟುವಿಗೆ ಇರುವ ‘ಮಿ.ಮಂಗಳೂರು ವಿವಿ’ ಪ್ರಶಸ್ತಿಗೆ ಭಾಜನ ರಾದರು.ಅದೇ ರೀತಿ ಆಕಾಶ್ ಹಳೆಯಂಗಡಿ ಅವರು ಅತ್ಯುತ್ತಮ ಮಸ್ಕ್ಯೂಲರ್ (ಸ್ನಾಯು ಹೊಂದಿರುವ) ಕ್ರೀಡಾಪಟುವಾಗಿ ಗುರುತಿಸಲ್ಪಟ್ಟರು.
ಗರಿಷ್ಠ ಅಂಕಗಳನ್ನು ಸಂಗ್ರಹಿಸಿ ಆಳ್ವಾಸ್ ಕಾಲೇಜು ತಂಡ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಮಡಂತ್ಯಾರಿನ ಸೆಕ್ರೇಡ್ ಹಾರ್ಟ್ ಕಾಲೇಜು ರನ್ನರ್ಅಪ್ ಪ್ರಶಸ್ತಿ ಪಡೆಯು. ಮಂಗಳೂರಿನ ಎಸ್ಡಿಎಂ ಕಾಲೇಜು ಮೂರನೇ ಹಾಗೂ ಅತಿಥೇಯ ಪೂರ್ಣಪ್ರಜ್ಞ ಸ್ವಾಯತ್ತ ಕಾಲೇಜು ನಾಲ್ಕನೇ ಸ್ಥಾನಗಳನ್ನು ಗೆದ್ದುಕೊಂಡವು.




